ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ವತಿಯಿಂದ ಪ್ರತಿ ತಿಂಗಳು ಜರಗುವ ಹಸಿವು ಮುಕ್ತ ಯೋಜನೆಯ ನವಂಬರ್ ತಿಂಗಳ ಕಾರ್ಯಕ್ರಮವು ಮಂಗಳೂರಿನ ಪ್ರತಿಷ್ಠಿತ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೆಲಂಕಣಿ ವಾರ್ಡಿನಲ್ಲಿ ಜರಗಿತು .

ಸುಮಾರು 215 ಕ್ಕು ಅಧಿಕ ಮಾನಸಿಕ ಹಾಗೂ ಅಮಲು ಮುಕ್ತ ರೋಗಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮನೋವೈದ್ಯಕೀಯ ಆಪ್ತ ಸಮಾಲೋಚಕ ಶ್ರೀಯುತ ಎಸ್ ಕೆ ಶ್ರೀಪತಿ ಭಟ್ ಪೆರಂಕಿಲ ವಾರ್ಡ್ ಮೇಲ್ವಿಚಾರಕಿ ಐರಿನ್ ಲೋಬೊ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ನ ಸ್ಥಾಪಕ ಅಧ್ಯಕ್ಷರಾದ ವೆಂಕಟೇಶ ಹೆಬ್ಬಾರ್ ಲಯನ್ಸ್ ವಲಯ ಅಧ್ಯಕ್ಷರಾದ ಪ್ರತಿಭಾ ಹೆಬ್ಬಾರ್ ಕೋಶಾಧಿಕಾರಿ ಬಿ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು



