ಮತ್ತೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬಣ್ಣ (ಜರ್ಸಿ)ದಲ್ಲಿ ನನ್ನನ್ನು ನಾನು ನೋಡಲು ಇಷ್ಟಪಡುತ್ತೇನೆ ಎಂದು ದಕ್ಷಿಣ ಆಫ್ರಿಕಾದ ದಂತಕತೆ, ಆರ್ಸಿಬಿ ತಂಡದ ಮಾಜಿ ಸ್ಟಾರ್ ಎಬಿ ಡಿವಿಲಿಯರ್ಸ್ ಆಸೆ ಪಟ್ಟಿದ್ದಾರೆ.

ಮಾಧ್ಯಮವೊಂದು ನಡೆಸಿ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಎಬಿಡಿ.. ನನ್ನ ಹೃದಯ RCB ಜೊತೆಗಿದೆ. ನಾನು ಆರ್ಸಿಬಿ ಫ್ರಾಂಚೈಸಿ ಜೊತೆ ಹಲವು ವರ್ಷಗಳಿಂದ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ. ನಾನು ಅವರಿಗೆ ಯಾವಾಗಲೂ ಕೃತಜ್ಞನಾಗಿರುತ್ತೇನೆ ಎಂದಿದ್ದಾರೆ.
ನನಗೆ ಆರ್ಸಿಬಿ ಮತ್ತು ಆ ತಂಡದ ಅಭಿಮಾನಿಗಳಿಂದ ಅಪಾರ ಬೆಂಬಲ ಸಿಕ್ಕಿದೆ. ಮತ್ತೆ ನಾನು ಆರ್ಸಿಬಿ ಸೇರಿಕೊಳ್ಳುವ ಬಗ್ಗೆ ಈಗ ಯಾವುದನ್ನೂ ಖಾತರಿ ಪಡಿಸಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಮತ್ತೆ RCB ಜರ್ಸಿಯಲ್ಲಿ ನನ್ನನ್ನು ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ ಎಂದಿದ್ದಾರೆ. ಎಬಿಡಿ ಈ ಹೇಳಿಕೆ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ. ಎಬಿಡಿ ಆರ್ಸಿಬಿ ತಂಡದ ಕೋಚ್ ಆಗಿ ಮತ್ತೆ ಮರಳಲಿ ಅನ್ನೋದು ಒತ್ತಾಯ ಆಗಿದೆ.



