ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಯಕ್ಷಾಶ್ರಯ ಯೋಜನೆಯಲ್ಲಿ ಸುಮಾರು 35 ವರ್ಷ ಗಳಿಂದ ಯಕ್ಷಗಾನದ ಸೇವೆಯಲ್ಲಿಯೇ ನಿರತರಾಗಿದ್ದ ದಾಮೋದರ ಪಾಟಾಳಿ ಎಂಬ ಕಲಾವಿದನಿಗೆ ಸುಂದರವಾದ ಮನೆಯನ್ನು ನಿರ್ಮಿಸಿ ಗಣ್ಯರ ಸಮಕ್ಷ ಹಸ್ತಾಂತರಿಸಲಾಯಿತು.
ಯಕ್ಷಧ್ರುವ ಪಟ್ಲ ಫೌಂಢೇಶನ್ ಪುತ್ತೂರು ಘಟಕದ ಅಧ್ಯಕ್ಷರು ಕರುಣಾಕರ ರೈ ದೇರ್ಲ ರ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರು ,ಆ ಮನೆಯ ದಾನಿಗಳೂ ಆದ ಪ್ರವೀಣ್ ಭೋಜ ಶೆಟ್ಟಿಯವರು ವಿಶೇಷ ಆಹ್ವಾನಿತರಾಗಿದ್ದರು. ಕೇಂದ್ರೀಯ ಸಮಿತಿ ಹಾಗೂ ಪುತ್ತೂರು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ದಾಮೋದರ ಪಾಟಾಳಿ ಮೊದಲು ವಾಸ್ತವ ಇದ್ದ ಹಳೆಯ ಮನೆ ಹಾಗೂ ನಿರ್ಮಾಣಗೊಂಡ ನೂತನ ಮನೆಯ ಚಿತ್ರ







