ಕಟೀಲು:ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ, ಕಲಿಸುವ ಗುರುಗಳಿಗೆ ಮೊದಲು ಗೌರವ ಕೊಡಲು ಕಲಿಯಬೇಕು ಎಂದು ಸಿನೆಮಾ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೇಳಿದ್ದಾರೆ.

ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಧಾನದ ಶಿಕ್ಷಣ ಸಂಸ್ಧೆಗಳ ವತಿಯಿಂದ ನಡೆದ ಭ್ರಮರ ಇಂಚರ ಕಾರ್ಯಕ್ರಮದ ಸಿನೆಮಾ ಮತ್ತು ರಂಗಭೂಮಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಅವಕಾಶ ಸಿಕ್ಕಾಗ ಇಂತಹ ವೇದಿಕೆಗಳನ್ನು ಬಳಸಿಕೊಂಡಾಗ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯಲು ಸಾಧ್ಯವಾಗುತ್ತದೆ ಎಂದ್ರು.
ಬಳಿಕ ಮಾತನಾಡಿದ ನಟ ರಮೇಶ್ ಭಟ್, ಎಲ್ಲಾ ಜನರಲ್ಲಿ ಒಬ್ಬೊಬ್ಬ ಕಲಾವಿದನಿದ್ದಾನೆ. ಅದು ಬೇರೆ ಬೇರೆ ರೀತಿಯದ್ದಾಗಿರಬಹುದು. ಆಸಕ್ತಿದಾಯಕ ಕೆಲಸದಲ್ಲಿ ತೊಡಗಿಸಿಕೊಳ್ಳಿ ಹಾಗು ಅದರ ಜೊತೆಗೆ ಕೇಂದ್ರಿಕ್ರತಗೊಳಿಸಿ, ಮಕ್ಕಳು ಪಾಠ ಮಾತ್ರವಲ್ಲದೆ ಪಾಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ ಆಗ ಸಾಧನೆ ಸಾಧ್ಯ ಎಂದರು.
ಈ ಸಂಧರ್ಭ ವೇದಿಕೆಯಲ್ಲಿ ಉದ್ಯಮಿಗಳಾದ ಮೋಹನ್ ಕುಮಾರ್ ಮಂಗಳೂರು, ತುಳು ಸಿನೆಮಾ ನಟ ಗಿರೀಶ್ ಶೆಟ್ಟಿ ಕಟೀಲು, ಪ್ರಶಿಲ್ ಶೆಟ್ಟಿ ಕುಡ್ತಿಮಾರುಗುತ್ತು, ವೃಂದಾ ಹೆಗ್ಡೆ, ಕಮಾಲಾದೇವಿ ಅಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರು ಗುತ್ತು ಮತ್ತಿತರರು ಉಪಸ್ಧಿತರಿದ್ದರು.



