ಜನ ಮನದ ನಾಡಿ ಮಿಡಿತ

Advertisement

ಲಕ್ಷದೀಪೋತ್ಸವಕ್ಕೆ ಸಜ್ಜುಗೊಂಡ ಧರ್ಮಸ್ಥಳ

ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ 8ರಿಂದ 12ರ ವರೆಗೆ ನಡೆಯಲಿರುವ ಲಕ್ಷದೀಪೋತ್ಸವದ ಮೆರುಗಿನ ತಯಾರಿ ಪೂರ್ಣಗೊಂಡಿದ್ದು, ಭಕ್ತರ ಸ್ವಾಗತಕ್ಕೆ ಅಣಿಯಾಗಿದೆ. ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ, ಇದರೊಂದಿಗೆ ರಾಜ್ಯಮಟ್ಟದ ವಸ್ತುಪ್ರದರ್ಶನ ನೆರವೇರಲಿದೆ.

ದೇವರಿಗೆ ಸ್ವರ್ಣ ಪಲ್ಲಕಿ, ಬೆಳ್ಳಿ ರಥೋತ್ಸವ ವಿಶೇಷ ಕ್ಷೇತ್ರದಲ್ಲಿ ಲಕ್ಷದೀಪೋತ್ಸವ, ಶಿವರಾತ್ರಿ ಹಾಗೂ ಕಾಲಾವಧಿ ಜಾತ್ರೆ ನೆರವೇರಲಿದೆ. ನಗರಾಲಂಕಾರದ ಸೊಬಗು ಇರಲಿದೆ. ವಿಶೇಷ ವರ್ಣಾಲಂಕಾರ ನೇತ್ರಾವತಿ ಸ್ನಾನಘಟ್ಟ ದಿಂದ ದೇವಸ್ಥಾನದ ವರೆಗೆ ಕಾಣಬಹುದಾಗಿದೆ. ಅದಲ್ಲದೆ ಪಾರಂಪರಿಕ ಶೈಲಿಯಲ್ಲಿ ಪಥಾಕೆ, ನಿಶಾನೆ, ನಗರಾಲಂಕಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಲಕ್ಷದೀಪೋತ್ಸವದಲ್ಲಿ ಪ್ರಮುಖ ಆಕರ್ಷಣೆ ರಾಜ್ಯಮಟ್ಟದ ವಸ್ತುಪ್ರದರ್ಶನ, ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರೌಢ ಶಾಲೆಯ ಸಂಪೂರ್ಣ ಆವರಣದಲ್ಲಿ ಸ್ಟಾಲ್‌ಗೆ ಅವಕಾಶ ಮಾಡಿಕೊಡಲಾಗಿದೆ. ಗ್ರಾಮೀಣಾಭಿವೃದ್ಧಿ, ರುಡ್‌ಸೆಟ್‌, ಸಿರಿ ಉತ್ಪನ್ನ, ವಾಹನ ಪ್ರದರ್ಶನ, ಸಾವಯವ ಕೃಷಿ ಉತ್ಪನ್ನ, ಕರಕುಶಲ ವಸ್ತು, ಯಂತ್ರ ಪರಿಕರ, ಗೃಹೋಪಯೋಗಿ ವಸ್ತುಗಳ ಮಳಿಗೆ ಸಹಿತ ತಿಂಡಿ ತಿನಿಸು ಸೇರಿದಂತೆ ನಾನಾ ಬಗೆಯ ವಸ್ತುಪ್ರದರ್ಶನ ಮಳಿಗೆ ಸಜ್ಜಾಗಿದೆ ಭಕ್ತರಿಗೆ ಮನೋರಂಜನೆಗಾಗಿ ಒಂದೆಡೆ ಮಳಿಗೆಗಳಾದರೆ ರಥಬೀದಿಯಲ್ಲಿ ಸುಮಾರು 1500 ಸಂತೆ ಅಂಗಡಿಗಳು ಇರಲಿವೆ. 2 ಲಕ್ಷಕ್ಕೂ ಅಧಿಕಮಂದಿ ಸೇರುವ ನಿರೀಕ್ಷೆಯಿದೆ. ಈಗಾಗಲೆ ರಾಜ್ಯಾದ್ಯಂತ ಎಲ್ಲೆಡೆ ಸರಕಾರಿ ಹೆಚ್ಚುವರಿ ಬಸ್‌ ಸೇವೆ, ಭಕ್ತರಿಗೆ ಊಟದ ವ್ಯವಸ್ಥೆ, ಆರೋಗ್ಯ ಸೇವೆ ಸಹಿತ ಸ್ವತ್ಛತೆಗೆ ವಿಶೇಷ ಆಧ್ಯತೆ ನೀಡಲಾಗಿದೆ.

ಡಿ. 10ರಂದು ಅಮೃತವರ್ಷಿಣಿ ಸಭಾಭವನ ದಲ್ಲಿ ಲಲಿತಕಲಾ ಗೋಷ್ಠಿಯಲ್ಲಿ ರಾತ್ರಿ 7ರಿಂದ 10.30ರವರೆಗೆ ಖ್ಯಾತ ಸಂಗೀತ ನಿರ್ದೇಶಕ ಗುರು ಕಿರಣ್‌ ಅವರಿಂದ ಗಾನ ನೃತ್ಯ ವೈವಿಧ್ಯ- ಗುರುಕಿರಣ್‌ ನೈಟ್‌ ಸಂಭ್ರಮ ನಡೆಯಲಿದೆ. ಡಿ.11 ಸರ್ವಧರ್ಮ ಅಧಿವೇಶನವನ್ನು ಖ್ಯಾತ ವಿದ್ವಾಂಸ ಬೆಂಗಳೂರಿನ ಡಾ. ಗುರುರಾಜ ಕರ್ಜಗಿ ಉದ್ಘಾಟಿಸುವರು. ಡಿ.12 ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನ ಇಸ್ರೋದ ಅಧ್ಯಕ್ಷ ಡಾ| ಎಸ್‌. ಸೋಮನಾಥ್‌ ಉದ್ಘಾಟಿಸುವರು.ಇಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!