ಉಡುಪಿ:ಉಡುಪಿ ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯು, ಪ್ರತೀ ವರ್ಷದಂತೆ ಈ ಬಾರಿಯೂ, ವರ್ಷಾರಂಭದಲ್ಲಿ ಜನವರಿ 1ರಿಂದ ಜನವರಿ 10 ರವರೆಗೆ, ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಆಯೋಜಿಸಿದೆ ಎಂದು, ಖ್ಯಾತ ಮನೋರೋಗ ತಜ್ಞ ಡಾ. ಪಿ. ವಿ. ಭಂಡಾರಿ ತಿಳಿಸಿದ್ದಾರೆ.

ಕಳೆದ 20 ವರ್ಷಗಳಿಂದ ಬಾಳಿಗಾ ಆಸ್ಪತ್ರೆಯು ಮಾನಸಿಕ ಆರೋಗ್ಯ, ಮದ್ಯವ್ಯಸನ ವಿಮುಕ್ತಿ, ಮಕ್ಕಳ ಮಾರ್ಗದರ್ಶನ ಕ್ಷೇತ್ರದಲ್ಲಿ ಸಮುದಾಯದ ಹಿತವನ್ನೇ ಮುಖ್ಯವಾಗಿ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಮಾದಕ ವ್ಯಸನ ವಿಮುಕ್ತಿ ಶಿಬಿರಕ್ಕೆ 3 ಲಕ್ಷಗಳಷ್ಟು ಖರ್ಚು ಬರುತ್ತದೆ. ಆಸಕ್ತ ದಾನಿಗಳು ನಮ್ಮ ಈ ಕಾರ್ಯದೊಡನೆ ಕೈಜೋಡಿಸಬಹುದು. ಒಂದು ದಿನದ ಸಂಪೂರ್ಣ ಖರ್ಚು, ಒಂದು ದಿನದ ಉಟೋಪಚಾರದ ಖರ್ಚು, ಒಂದು ದಿನದ ಔಷಧೋಪಚಾರದ ಖರ್ಚುಗಳನ್ನು ಭರಿಸುವುದರ ಮೂಲಕ ದೇಣಿಗೆಯನ್ನು ನೀಡಲು ಇಚ್ಛಿಸುವವರು ದೂರವಾಣಿ ಸಂಖ್ಯೆ 92428 21215 ಸಂಪರ್ಕಿಸಲು ಮನವಿ ಮಾಡಿದ್ದಾರೆ.



