ಬಂಟ್ವಾಳ: ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹನುಮಾನ್ ನಗರದ ವಿಶಾಲ ಮೈದಾನದಲ್ಲಿ ಶನಿವಾರ ನಿರಂತರ ಎರಡೂವರೆ ತಾಸುಗಳ ಕಾಲ ಹೊನಲು ಬೆಳಕಿನಲ್ಲಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸವ, ಮೈನವೀರೆಳಿಸುವ ಕಸರತ್ತನ್ನು ಕಂಡು ಮಾಜಿಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಹಿತ ಗಣ್ಯಾತಿಗಣ್ಯರು ವಸ್ತುಶ: ಬೆರಗಾದರು.


40 ವಿಶೇಷ ಚೇತನ ಮಕ್ಜಳು ಸೇರಿದಂತೆ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ತರಗತಿಗಳ ಒಟ್ಟು 3,500 ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ನೆರೆದ ಜನಸ್ತೋಮ ಹೆಬ್ಬೆರುವಂತೆ ಮಾಡಿದರು.
ವಿದ್ಯಾರ್ಥಿಗಳಿಂದ ಪಥಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ತುಳುನಾಡಿನ ವೈಭವ, ದ್ವಿಚಕ್ರ- ಏಕಚಕ್ರ ಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಆಕರ್ಷಕ ಚಂದ್ರಯಾನ -3 ಉಡ್ಡಯಾನ , ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರ ಸೇರಿದಂತೆ 20 ವೈಶಿಷ್ಟ್ಯಪೂರ್ಣ ಕಲಾ ಕೌಶಲ್ಯಗಳನ್ನು ಪ್ರದರ್ಶಿಸಿ ಗಮನಸೆಳೆದರು.



ಜೀವನದ ಅವಿಸ್ಮರಣೀಯ ದಿನ :ಎಚ್ ಡಿ ಕೆ
ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಮುಖ್ಯಮಂತ್ರಿಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ,ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಅಗಮಿಸಿರುವುದು ತನ್ನ
ಜೀವನದ ಅವಿಸ್ಮರಣೀಯ ದಿನವಾಗಿದೆ.ಇಲ್ಲಿಗೆ ತಾನು ಬಾರದಿದ್ದರೆ ತನ್ನ ಜೀವನದಲ್ಲಿ ನಷ್ಟವಾಗುತಿತ್ತು ಎಂದು ಹೇಳಿದರು.
ಶಾಲೆಯ ಸಂಸ್ಥಾಪಕಾರದ,ಡಾ.ಪ್ರಭಾಕರ ಭಟ್ ಅವರು ಸಮಾಜ ಶಿಕ್ಷಣಕ್ಕೆ ನೀಡಿತ್ತಿರುವ ಕೊಡುಗೆ ಅಪಾರವಾಗಿದೆ.
ದೇಶದ ಸಂಸ್ಕೃತಿ ಹೊಂದಿರುವ ಗುರುಕಲ ಪರಂಪರೆ,ಹಿರಿಯರಿಗೆ ಗೌರವ, ಸಂಸ್ಕಾರ,ಮಕ್ಕಳಿಗೆ ಶಿಸ್ತಿನ ಬದುಕು,ದೇಶದ ಸಾಂಸ್ಕೃತಿಕ ಪರಿಚಯವನ್ನು ಈ ವಿದ್ಯಾ ಸಂಸ್ಥೆಯಲ್ಲಿ ನೀಡುತ್ತಿರುವುದು ಅಭಿನಂದನೀಯ ವಾಗಿದೆ ಎಂದ ಅವರು ಜ್ಞಾನ ,ಬುದ್ದಿ,ಮಾನವೀಯತೆಯ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ ಎಂದರು.
ಬಾಲ್ಯದಲ್ಲಿತಾನುಶ್ರೀರಾಮನ ಭಜನೆಯನ್ನು ಮಾಡುತ್ತಿದ್ದ ದಿನವನ್ನು ಕ್ರೀಡೋತ್ಸವ ಮತ್ತೆ ನೆನಪಿಸಿದೆ.
ಹಿಂದಿನ ಸಾಂಸ್ಕೃತಿಕ ಕಲೆಗಳಿಂದ ಮೊದಲದಗೊಂಡು ಇಂದಿನ ಚಂದ್ರಯಾನ-3 ರವರೆಗಿನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ಅದ್ಬುತವಾಗಿ ಮಕ್ಕಳು ಪ್ರದರ್ಶಿಸಿದ್ದಾರೆ ಎಂದ ಅವರು ಭಾಂಧವ್ಯದ ಕೊರತೆ ಕಾಣುತ್ತಿರುವ ಈ ಸಂದರ್ಭದಲ್ಲಿ ಸೌಹಾರ್ಧದಿನಗಳನ್ನು ಕಾಣಲು ಸಂಸ್ಕೃತಿಯ ಬದುಕನ್ನು ಶಿಕ್ಷಣದ ಮುಇಲಕ ಕೊಡುತ್ತಿರುವ ಹಾಗೂ ಸರಕಾರದ ಕಣ್ತೆರಸುವ ಶಿಕಗಷಣ ಸಂಸ್ಥೆಯನ್ನು ನಡೆಸುತ್ತಿರುವ ಡಾ.ಭಡ್ ಅವರ ಕಾರ್ಯಶ್ಲಾಘನೀಯವಾಗಿದೆ ಎಂದರು.

















