ಜನ ಮನದ ನಾಡಿ ಮಿಡಿತ

Advertisement

2 ಲಕ್ಷ ಹೂಗಳಿಂದ ಶೃಂಗಾರಗೊಳ್ಳಲಿರುವ ಕೃಷಿ ಸಿರಿ ಆಳ್ವಾಸ್ ವಿರಾಸತ್‌ನಲ್ಲಿ ಪುಷ್ಪಕಾಶಿ

ಮೂಡುಬಿದಿರೆ:ಅಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಪುತ್ತಿಗೆಯ ಪ್ಯಾಲೇಸ್ ಗೌಂಡ್‌ನಲ್ಲಿ ಇದೇ ಬರುವ 14 ರಿಂದ 17ರವರೆಗೆ ಆಯೋಜಿಸಿರುವ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವಕ್ಕೆ ಬರುವ ಕಲಾಪ್ರೇಮಿಗಳನ್ನು ಸ್ವಾಗತಿಸಲು ವೈವಿಧ್ಯಮಯ ಪುಷ್ಪಗಳ ಪ್ರದರ್ಶನಕ್ಕೆ ಕೃಷಿ ಸಿರಿ ಆವರಣ ಸಜ್ಜುಗೊಂಡಿದೆ.

ವಿರಾಸತ್‌ನಲ್ಲಿ ಕೃಷಿ ಸಂಸ್ಕೃತಿಗೆ ಒತ್ತು ನೀಡುವ ಸಲುವಾಗಿ ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ವಿವಿಧ ಆಯಾಮಗಳ ಚಿತ್ರಣವನ್ನು ಕೃಷಿಮೇಳ ನೀಡಲಿದೆ. ಈ ಹಿನ್ನೆಲೆಯಲ್ಲಿ ಕೃಷಿ ಸಿರಿ ಅವರಣದ ಹಾರೆಯ ಎತ್ತರದ ಜಾಗದ ಉದ್ದಕ್ಕೂ ಹಸಿರು ಪುಷ್ಪಗಳು ನಳ ನಳಿಸುತ್ತಿವೆ.

ವಿವಿಧ ತಳಿಯ ಸಸಿಗಳನ್ನು ಹೂಕುಂಡದಲ್ಲಿಟ್ಟು ಬೆಳೆಸುತ್ತಿದ್ದು ವಿರಾಸತ್ ವೇಳೆ ಪ್ರದರ್ಶನಗೊಳ್ಳಲಿವೆ. ಫಲ ಹಾಗೂ ಪುಷ್ಪ ಸಂಸ್ಕೃತಿಯ ಅತಿಥ್ಯ ಇಲ್ಲಿ ಸೊಗಯಿಸಲಿದೆ. ಬಯಲು ಸೀಮೆ, ಉತ್ತರ ಕರ್ನಾಟಕ, ಮಹಾರಾಷ್ಟ್ರ ಮುಂತಾದ ಪ್ರದೇಶಗಳಲ್ಲಿ ಹೇರಳವಾಗಿ ಸಿಗುವ ಹೂ, ತರಕಾರಿ, ಹಣ್ಣುಗಳ ಪರಿಚಯ, ಪ್ರದರ್ಶನ ವಿರಾಸತ್ ಮೇಳದಲ್ಲಿ ಇರಲಿದೆ. ದೇಶ ವಿದೇಶಗಳ ತಳಿಗಳು, ದೇಶಿ ತಳಿಗಳು, ಕಸಿ ಮಾಡಿದ ವೈವಿಧ್ಯಮಯ ಫಲಗಳು ಸಿಗಲಿವೆ. ಹೂ ಹಣ್ಣುಗಳಿಂದ ಮಾಡಿದ ಕಲಾಕೃತಿಗಳೂ ಮನ ಸೆಳೆಯಲು ಸಿದ್ಧಗೊಂಡಿವೆ. ಕೃಷಿ ಸಿರಿ ಅವರಣ 2 ಲಕ್ಷ ಹೂಗಳಿಂದ ಶೃಂಗಾರಗೊಳ್ಳಲಿದ್ದು ಒಂದೂವರೆ ಲಕ್ಷ ಗಿಡಗಳ ನಾಟಿ ಕಾರ್ಯ ಮುಗಿದಿದೆ. 50 ಸಾವಿರ ಗಿಡಗಳು ಪೂನಾ ಮತ್ತಿತರ ಕಡೆಗಳಿಂದ ಬರಲಿವೆ. ಇವುಗಳ ನಿರ್ವಹಣೆ ಮತ್ತು ಪ್ರದರ್ಶನದ ಜವಾಬ್ದಾರಿಯನ್ನು ಪೂನಾದ ಖಾಸಗಿ ಕಂಪೆನಿಗೆ ನೀಡಲಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!