ಬೆಂಗಳೂರು: ಆಟ ಆಡುತ್ತಿದ್ದ ಪುಟ್ಟ ಮಗುವಿನ ಮೇಲೆ ಕಾರು ಹರಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಅನಿತಾ ದಂಪತಿಯÀ ಅರ್ಬಿನಾ (೩) ಎಂಬ ಮಗುವಿನ ಮೇಲೆ ಚಾಲಕ ಕಾರು ಹತ್ತಿಸಿ ಹತ್ಯೆಗೈದಿದ್ದಾನೆ.

ಮಗುವೊಂದು ಅಪಾರ್ಟ್ಮೆಂಟ್‌ವೊAದರ ಎದುರು ಕುಳಿತು ಆಟ ಆಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತಂದರು.ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಮೊದಲು ಪೋಷಕರು ತಮ್ಮ ಅರಿವಿಗೆ ಬಾರದೇ ಕಟ್ಟಡದ ಮೇಲಿಂದ ಮಗು ಬಿದ್ದಿರುವುದಾಗಿ ದೂರು ಕೊಟ್ದಿದ್ದರು. ಆದರೆ ಮಗುವಿನ ರಕ್ತಸ್ರವಾ ಆಗುತ್ತಿದ್ದುದ್ದನ್ನು ಕಂಡು ಅನುಮಾನಗೊಂಡ ಪೊಲೀಸರು ಸಿಸಿಟಿವಿಯನ್ನು ಪರಿಶೀಲಿಸಿದಾಗ ಎಕ್ಸ್ ಯುವಿ ಕಾರು ಮಗುವಿನ ಮೇಲೆ ಹರಿದಿರುವುದು ತಿಳಿದು ಬಂದಿದೆ. ಕೃತ್ಯ ಎಸಗಿದ ಅಪಾರ್ಟ್ಮೆಂನ ಸುಮನ್ ಎಕ್ಸ್ ಯುವಿ ಕಾರು ಚಾಲಕನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.




