ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಬೆಂಗಳೂರು ಇವರು ಹಮ್ಮಿಕೊಂಡ ಯೋಜನೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಿಂಚಣಿ ಕುಂದು ಕೊರತೆಗಳನ್ನು ನೋಂದಾಯಿಸಲು ಮತ್ತು ಪಿಂಚಣಿ ಕುರಿತಾದ ಮಾಹಿತಿ ನೀಡಲು ಬಂಟ್ವಾಳ ತಾಲೂಕು ಕಂದಾಯ ಇಲಾಖೆಯಿಂದ ಶನಿವಾರ ಗೋಳ್ತಮಜಲು ಗ್ರಾಮದಲ್ಲಿ “ಪಿಂಚಣಿ ದಿನ” ಆಚರಿಸಲಾಯಿತು.

ಗೋಳ್ತಮಜಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರೇಮ ಅವರು ಇಂತಹ ಯೋಜನೆಗಳಿಂದ ಬಡವರಾದ ಅಸಹಾಯಕ ವ್ಯಕ್ತಿಗಳಿಗೆ ಬಹಳಷ್ಟು ನೆರವು ದೊರೆಯುತ್ತದೆ. ಅಧಿಕಾರಿಗಳೇ ಫಲಾನುಭವಿಗಳ ಬಳಿಗೆ ಬಂದು ಪಿಂಚಣಿ ದಿನಾಚರಣೆಯನ್ನು ಆಚರಿಸುವುದು ಬಹಳ ಅರ್ಥಪೂರ್ಣವಾಗಿದೆ. ಇದರಿಂದ ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗುತ್ತದೆ ಎಂದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ ಗೌಡ ಮಕ್ಕಾರು, ಕಂದಾಯ ಇಲಾಖೆಯ ಉಪತಹಶೀಲ್ದಾರರಾದ ದಿವಾಕರ ಮುಗುಳಿಯ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕರಾದ ವಿಜಯ್ ಆರ್. ಗ್ರಾಮ ಆಡಳಿತ ಅಧಿಕಾರಿ ಶಿಲ್ಪಾ ಜನಾರ್ಧನ್, ತಾಲೂಕು ಕಚೇರಿ ಸಿಬ್ಬಂದಿ ವೆಂಕಟರಮಣ ಗ್ರಾಮ ಸಹಾಯಕರಾದ ಮೋಹನ್ ದಾಸ್ ಕೊಟ್ಟಾರಿ,ಸಂಜೀವ ಮಂಚಿ, ಸದಾನಂದ ಪುದು, ವಿಠಲ ಬಡಗಬೆಳ್ಳೂರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ್ ಆಳ್ವ ಸ್ವಾಗತಿಸಿ, ವಂದಿಸಿದರು. ಫಲಾನುಭವಿಗಳು ಅದಾಲತ್ ನ ಸದುಪಯೋಗ ಪಡೆದರು.



