ಪುತ್ತೂರು:ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಾಲಯದ ಪಟ್ಟದ ಶ್ರೀ ದೇವರ 125 ನೇ ಪ್ರತಿಷ್ಠೆ ವರ್ಧಂತಿ, ಶ್ರೀ ದೇವರ ಶಿಲೆ ವಿಗ್ರಹದ 60ನೇ ಪ್ರತಿಷ್ಠೆ ವರ್ಧಂತಿ ಮತ್ತು ಪರಿವಾರ ಶ್ರೀ ಮುರಳೀಧರ ಗೋಪಾಲ ಕೃಷ್ಣ ದೇವರ 10 ನೇ ಪ್ರತಿಷ್ಠೆ ವರ್ಧಂತಿ ಪರ್ವ ಕಾಲದಲ್ಲಿ ಜ.20 ರಂದು ನೂತನ ರಜತ ಲಾಲ್ಕಿಯನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲು ಪುರ ಪ್ರವೇಶ ಕಾರ್ಯಕ್ರಮವು ನಡೆಯಿತು.

ನೂತನ ಲಾಲ್ಕಿಯನ್ನು ಸೇವಾದಾರರಾದ ಮಂಗಳೂರಿನ ಸಿಎ ನರೇಂದ್ರ ಪೈ, ಅವರ ತಾಯಿ ಸುಶೀಲ ಪೈ, ಯಜ್ಞವಂತ ಪೈ ಮಂಗಳೂರು ಅವರು ಕುಟುಂಬ ಸಮೇತರಾಗಿ ಸೇವಾ ರೂಪದಲ್ಲಿ ನೀಡಿದ್ದಾರೆ.
ಲಾಲ್ಕಿಯ ಮರದ ಕೆಲಸವನ್ನು ಕಾರ್ಕಳದ ದಿಲೀಪ್ ಮರಾಟೆ ನಿರ್ಮಿಸಿದ್ದಾರೆ. ಸುಂದರ ಬೆಳ್ಳಿ ಹೊದಿಕೆ ಕುಸುರಿ ಕೆಲಸವನ್ನು ಉಪ್ಪಿನಂಗಡಿಯ ಸ್ವರ್ಣೋದ್ಯಮಿ ಎಂ. ಚಂದ್ರಕಾAತ್ ಅವರ ಶಿಲ್ಪಿಯವರಾದ ಮಾಳ ಎಂ. ರಾಮ ಶೇರಿಗಾರ ಮಾಡಿದ್ದಾರೆ.
ನೂತನ ರಜತ ಲಾಲ್ಕಿಯನ್ನು ಶ್ರೀ ದೇವರಿಗೆ ಫೆ. 4 ರಂದು ಬೆಳಗ್ಗೆ ಶ್ರೀ ಸಂಸ್ಥಾನ ಕಾಶಿ ಮಠ ದ ಶ್ರೀ ಸಮ್ಯಮೇ೦ದ್ರ ತೀರ್ಥ ಸ್ವಾಮಿಗಳು ಸಮರ್ಪಣೆ ಮಾಡಲಿದ್ದಾರೆ.
ಪುರ ಪ್ರವೇಶ
ಲಾಲ್ಕಿಯ ಪುರಪ್ರವೇಶ ಕಾರ್ಯಕ್ರಮವು ಬೋಳುವಾರು ಶ್ರೀ ಸುಬ್ರಮಣ್ಯ ನಗರದಿಂದ ಬಿರುದಾವಳಿ, ಚೆಂಡೆ, ವಾದ್ಯ, ಬ್ಯಾಂಡ್, ಪೂರ್ಣ ಕುಂಭ, ಭಜನೆ ಜೊತೆಗೆ ವೈಭವದಿಂದ ಪುತ್ತೂರು ಪೇಟೆ ರಾಜ ರಸ್ತೆಯಲ್ಲಿ ಸಾಗಿ, ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಸನಿಧಿಯಲಿ ಪ್ರಾರ್ಥನೆ ಸಲ್ಲಿಸಿ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವರ ಸನಿಧಿಯಲ್ಲಿ ಕೊನೆಗೊಂಡಿತು.
ಪುತ್ತೂರು ಪೇಟೆ ಜಿಎಸ್‌ಬಿ ಸಮಾಜದ ಭಾಂಧವರು, ಶ್ರೀ ದೇವರ ಭಕ್ತರು, ಆಡಳಿತ ಮಂಡಳಿ ಸದಸ್ಯರು ಪುರ ಪ್ರವೇಶ ಮೆರವಣಿಗೆಯಲ್ಲಿ ಪಾಲ್ಗೊಂಡರು.



