ಪುತ್ತೂರಿನ ಅತ್ಯಂತ ಹಿರಿಯ ಅಯೋಧ್ಯಾ ಕರಸೇವಕರು , ಪುತ್ತೂರಿನ ಹಳ್ಳಿ ಹಳ್ಳಿ ತಿರುಗಿ ರಾಮ ಜನ್ಮ ಭೂಮಿಯ ಜಾಗೃತಿ ಮೂಡಿಸಿದ್ದ ಶ್ರೀರಾಮ ಶಿಲಾಪೂಜನ ಸಮಿತಿ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷರು , ಪುತ್ತೂರು ನಗರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ 93 ವರ್ಷ ಹರೆಯದ ನಟ್ಟೋಜ ಶಿವಾನಂದ ರಾವ್ ರವರನ್ನು ಇಂದು ಪುತ್ತಿಲ ಪರಿವಾರದ ವತಿಯಿಂದ ಸನ್ಮಾನಿಸಲಾಯಿತು.

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯ ಈ ಶುಭ ಸಂದರ್ಭದಲ್ಲಿ ತಮ್ಮ ಪ್ರಾಣರ್ಪಣೆಗೂ ಸಿದ್ಧವಾಗಿ ಹೋರಾಡಿದ ಈ ಹಿರಿಯರಿಗೆ ಇಂದು ಧನ್ಯತಾ ಭಾವ ಮೂಡಿದೆ.
ಈ ಸಂದರ್ಭ ಅವರ ಪುತ್ರ ಪುತ್ತೂರು ಅಂಬಿಕಾ ವಿದ್ಯಾಲಯದ ಮುಖ್ಯಸ್ಥರಾದ ಸುಬ್ರಹ್ಮಣ್ಯ ನಟ್ಟೋಜ, ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷರಾದ ಪ್ರಸನ್ನ ಮಾರ್ತ, ಕಾರ್ಯದರ್ಶಿ ಉಮೇಶ್ ವೀರಮಂಗಲ, ರೂಪೇಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.



