ದಕ್ಷಿಣ ಕನ್ನಡ : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲೆಯ ಘಟಕದ ಉಸ್ತುವಾರಿಯಲ್ಲಿ , ಮೂಡಬಿದ್ರೆ ತಾಲೂಕು ಘಟಕದ ನೂತನ ಸದಸ್ಯರ ಪದಗ್ರಹಣ ಸಮಾರಂಭ ಮತ್ತು ಜಾನಪದ ಸಂಭ್ರಮ ಮತ್ತು ಕೆಡ್ಡಸ ಆಚರಣೆ ಕಾರ್ಯಕ್ರಮವು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆಯಿತು.

ಜಾನಪದ ಪರಿಷತ್ತು ಮೂಡಬಿದ್ರೆ ತಾಲೂಕು ಘಟಕ,ತುಳುಕೂಟ ಮೂಡಬಿದರೆ, ತುಳು ವರ್ಲ್ಡ್ ಮಂಗಳೂರು, ಇದರ ಸಂಯುಕ್ತ ಆಶ್ರಯದಲ್ಲಿ “ತುಳುನಾಡ ಕೆಡ್ಡಸ ಆಚರಣೆ” ಹಾಗೂ “ಜಾನಪದ ಸಂಭ್ರಮ” ಮತ್ತು ನೂತನ ಸದಸ್ಯರ ಪದಗ್ರಹಣ ಸಮಾರಂಭ , ತುಳುನಾಡ ಕೆಡ್ಡಸ ಆಚರಣೆ ಪ್ರಾತ್ಯಕ್ಷಿಕೆಯನ್ನು ಶ್ರೀನಿವಾಸ ಆಳ್ವ, ಕಳತ್ತೂರು, ರಾಜೇಶ್ ಆಳ್ವರ ಸಹಕಾರದೊಂದಿಗೆ ಜನರಿಗೆ ಮನಮುಟ್ಟುವಂತೆ ವಿವರಿಸಿದರು ತುಳು ಸಾಹಿತಿ ಉಗ್ಗಪ್ಪ ಪೂಜಾರಿಯವರು ತಾನು ಬರೆದ ಜಾನಪದ ಪಾಡ್ಡನ ಸೊಗಸಾಗಿ ಹಾಡಿ ವಿವರಣೆ ನೀಡಿದರು.
ಜಾನಪದ ಸಂಭ್ರಮದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಭೂಷಣ ಡಾಕ್ಟರ್ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಜೈನ ಮಠ ಮೂಡಬಿದ್ರೆ ಇವರು ನೆರವೇರಿಸಿ ಶುಭಾಶಿರ್ವಾದ ಮಾತುಗಳ ನುಡಿದರು.

ಸಭಾಧ್ಯಕ್ಷತೆಯನ್ನು ಪದ್ಮಶ್ರೀ ಭಟ್ ಅಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು ಮೂಡಬಿದ್ರೆ ತಾಲೂಕು ಘಟಕ, ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ , ಅಧ್ಯಕ್ಷರು ಜಾನಪದ ಪರಿಷತ್ ದಕ್ಷಿಣ ಕನ್ನಡ,,, ಧನ ಕೀರ್ತಿ ಬಲಿಪ, ಡಾಕ್ಟರ್ ರಾಜೇಶ ಆಳ್ವ, ಚಂದ್ರಹಾಸ ದೇವಾಡಿಗ, ಡಾಕ್ಟರ್ ರಾಜೇಶ್ ಭಟ್ ಮಂದಾರ, ರಾಜೇಶ್ ಸ್ಕೈಲಾರ್ಕ್, ಮೋಹನದಾಸ ರೈ ಇವರು ಗೌರವ ಉಪಸ್ಥಿತರಿದ್ದರು ಹಾಗೂ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಚೇತನ ರಾಜೇಂದ್ರ ಹೆಗ್ಡೆ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಂದಾರ ರಾಜೇಶ್ ಭಟ್, ಅಗರಿ ರಾಘವೇಂದ್ರ ರಾವ್, ಅರುಣ್ ಅಜೆಕಾರ್, ಉಗಪ್ಪ ಪೂಜಾರಿ ಇವರನ್ನು ಸನ್ಮಾನಿಸಲಾಯಿತು.

ನೂತನ ಸದಸ್ಯರೆಲ್ಲರಿಗೂ ಜಾನಪದ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಗುರುತಿನ ಚೀಟಿ ಅಧಿಕೃತಗೊಳಿಸಿದರು.
ವಾಯ್ಸ್ ಆಫ್ ಆರಾಧನಾ ತಂಡದ ಮಕ್ಕಳಿಂದ ಜಾನಪದ ಸಂಭ್ರಮ ಅತ್ಯುತ್ತಮವಾಗಿ ಮೂಡಿ ಬಂತು
ಮಂದಾರ ರಾಜೇಶ್ ಭಟ್ಟರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.






