ಶ್ರೀ ಶಾರದಾ ಸೆಂಟ್ರಲ್ ಸ್ಕೂಲ್, ಶಿಮಂತೂರಿನ ವಿದ್ಯಾರ್ಥಿಗಳಿಗೆ ಕಳೆದ ಜೂನ್ ತಿಂಗಳಲ್ಲಿ ಪ್ರಾರಂಭಗೊಂಡ ಉಚಿತ ಕರಾಟೆ ತರಗತಿಯು ಮುಕ್ತಾಯಗೊಂಡಿದ್ದು ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆಯನ್ನು ಆಯೋಜಿಸಲಾಯಿತು.

ಕರಾಟೆ ತರಬೇತಿಯಲ್ಲಿ ಹಲವಾರು ವರ್ಷಗಳ ಅಪಾರ ಅನುಭವ ಹೊಂದಿರುವ ಕರಾಟೆ ಮಾಸ್ಟರ್. ಕ್ಯೋಷಿ.ಈಶ್ವರ್ ಕಟೀಲ್ ಮುಖ್ಯ ಪರಿವೀಕ್ಷಕರಾಗಿ ಪರೀಕ್ಷೆಯನ್ನು ನಡೆಸಿ, ಭಾರತವು ಕರಾಟೆಯನ್ನು ಸಮರ ವಿಜ್ಞಾನವಾಗಿ ಕಲಿಸುತ್ತದೆ, ಅಲ್ಲಿ ಕರಾಟೆ ಪರಿಕಲ್ಪನೆಗಳು ವಿಜ್ಞಾನ ಮತ್ತು ಗಣಿತದ ಮೂಲಭೂತ ಅಂಶಗಳಿಗೆ ಸಂಬಂಧಿಸಿರಬಹುದು. ಇವುಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.ಇವರೊಂದಿಗೆ. ಶಿಹಾನ್ ಮೋರ್ಗನ್ ವಿಲಿಯಮ್, ರೆಂಷಿ ಚಂದ್ರಹಾಸ್ ಕಟೀಲ್,ಸೆನ್ಸ್ಯಿ ಸುಮಂತ್, ಸೀನಿಯರ್ ಬ್ಲಾಕ್‌ಬೆಲ್ಟ್ ಪರಿಣಿತರು ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ಈ ಪರೀಕ್ಷೆಯಲ್ಲಿ ಸುಮಾರು 130 ವಿದ್ಯಾರ್ಥಿಗಳು ಭಾಗವಹಿಸಿದ್ದು ಮುಂದಿನ ಹಂತಕ್ಕೆ ಉತ್ತೀರ್ಣರಾಗಿರುತ್ತಾರೆ. ಈ ಪೈಕಿ 33 ವಿದ್ಯಾರ್ಥಿಗಳಿಗೆ ಹಳದಿ, 36 ವಿದ್ಯಾರ್ಥಿಗಳಿಗೆ ಹಸಿರು, 26 ವಿದ್ಯಾರ್ಥಿಗಳಿಗೆ ಕೇಸರಿ, 30 ವಿದ್ಯಾರ್ಥಿಗಳಿಗೆ ನೀಲಿ, 5 ವಿದ್ಯಾರ್ಥಿಗಳಿಗೆ ನೇರಳೆ ಬಣ್ಣದ ಬೆಲ್ಟ್ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಪ್ರಾಂಶುಪಾಲರಾದ ಜಿತೇಂದ್ರ ವಿ ರಾವ್ , ಶಾಲಾ ಕರಾಟೆ ತರಬೇತುದಾರರಾದ ಶಿಹಾನ್ ನಾಗರಾಜ್ ಕುಲಾಲ್ ಉಪಸ್ಥಿತರಿದ್ದರು.



