ಹಳೆಯಂಗಡಿ : ನಂದಿನಿ ಕ್ರಿಕೆಟರ್ಸ್ ಮತ್ತು ನಂದಿನಿ ಗ್ರಾಮ ಅಭಿವೃದ್ಧಿ ಸಂಘ ಇದರ ವಾರ್ಷಿಕೋತ್ಸವ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ದಿನಾಂಕ 11.02.2024ನೇ ಭಾನುವಾರ ನೆರವೇರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಿನಿ ಕ್ರಿಕೆಟರ್ಸ್ ಮತ್ತು ನಂದಿನಿ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ಪುರುಷೋತ್ತಮ್ ದೇವಾಡಿಗರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮೊಗವೀರ ಸಂಘ ಮಿತ್ರ ಪಟ್ನ ಮುಕ್ಕ ಇದರ ಕಾರ್ಯದರ್ಶಿ ಶ್ರೀ ರಾಜೇಶ್, ದೇವಾಡಿಗರ ಸೇವಾ ಸಂಘ (ರಿ) ಪಾವಂಜೆ ಅಧ್ಯಕ್ಷರಾದ ಶ್ರೀರಾಮದಾಸ್ ಪಾವಂಜೆ, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್ ಮುಕ್ಕ ಮ್ಯಾನೇಜರ್ ಜಗನ್ನಾಥ ಕೋಟ್ಯಾನ್ ರಿದ್ಧಿ ಸಿದ್ಧಿ ಟೋಲ್ ಪ್ಲಾಜಾ ಬೆಂಗಳೂರು ಮಾಲಕರಾದ ಯಜ್ಞೇಶ್ ಕರ್ಕೇರ, ಕಚ್ಚೂರು ಮಾಲ್ದಿ ದೇವಿ ದೈವಸ್ಥಾನ ಮೂಲ ಕ್ಷೇತ್ರ ಬಾರ್ಕೂರು ಅಧ್ಯಕ್ಷರಾದ ಶಿವಪ್ಪ ನಂತೂರು, ಬಿಲ್ಲವ ಸಂಘ ಪೂಣೆ ಜೊತೆ ಕಾರ್ಯದರ್ಶಿಯಾಗಿರುವ ಪ್ರದೀಪ್ ಕುಮಾರ್, ಕುಮೆರುದನ್ನ ಕುಮೇರ್ ಮೂಲಸ್ಥಾನ ಅಧ್ಯಕ್ಷರಾದ ನವೀನ್ ಚೇಳಾಯರು, ಪಾವಂಜೆ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷರಾದ ರಾಘು ದೇವಾಡಿಗ, ನಂದಿನಿ ಕ್ರಿಕೆಟರ್ಸ್ ತಂಡದ ನಾಯಕ ಸುಮನ್, ಗೌರವಾಧ್ಯಕ್ಷರಾದ ಶ್ರೀ ವಿಠ್ಠಲ್ ದೇವಾಡಿಗ ರವರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಕಲಿಕೆಯಲ್ಲಿ ಸಾಧನೆಯನ್ನು ತೋರಿದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಈ ವಿದ್ಯಾರ್ಥಿ ವೇತನವನ್ನು ಮುಕ್ಕ ಪ್ರೋಟೀನ್ಸ್ ಲಿಮಿಟೆಡ್ ಮುಖ್ಯಸ್ಥರಾದ ಮೊಹಮ್ಮದ್ ಹ್ಯಾರಿಸ್ ಮತ್ತು ಭಾವ ಫಿಶರೀಸ್ ಮಿಲ್ ಮುಖ್ಯಸ್ಥರಾದ ಶ್ರೀ ಭಾವರವರ ಸಹಕಾರದಲ್ಲಿ ನೀಡಲಾಯಿತು. ಸುಮಾರು 25 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು ಮತ್ತು ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನರೇಶ್ ರವರು ನೆರವೇರಿಸಿಕೊಟ್ಟರು, ಬಹುಮಾನಗಳನ್ನು ಸಭಾ ವೇದಿಕೆಯಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗೀತಾ ಮತ್ತು ಪಾರ್ವತಿ ರವರು ಪ್ರಾರ್ಥನೆಯನ್ನು ನಿರ್ವಹಿಸಿ ಶ್ರೀ ಶಿವರಾಜ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ಕಾರ್ಯಕ್ರಮವನ್ನು ನಿರೂಪಿಸಿದರು



