ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಆರಂಭಗೊಳ್ಳಲಿರುವ “ಶ್ರೀಮತಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್” ಇದರ ಶಿಲಾನ್ಯಾಸ ಕಾರ್ಯಕ್ರಮವು ಫೆ.21 ರಂದು ಬೆಳಿಗ್ಗೆ 9.30ಕ್ಕೆ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಮಹಾ ದಾನಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿಯವರ ಮುಖ್ಯ ಉಪಸ್ಥಿತಿಯಲ್ಲಿ, ಶ್ರೀ ತೋನ್ಸೆ ಆನಂದ್ ಎಮ್. ಶೆಟ್ಟಿ ಮತ್ತು ಶ್ರೀಮತಿ ಶಶಿರೇಖಾ ಆನಂದ್ ಶೆಟ್ಟಿಯವರಿಂದ ನೆರವೇರಲಿರುವುದು.

ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ, ಶ್ರೀ ಕೆ. ಪ್ರಕಾಶ್ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ರಾಕ್ಷಿ ಡೆವಲಪರ್ಸ್, ಅರವಿಂದ್ ಆನಂದ್ ಶೆಟ್ಟಿ, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ನಿರ್ದೇಶಕರು, ಮಹಾ ಪೋಷಕರು, ಪೋಷಕರು, ದಾನಿಗಳು,ಬಂಟರ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಹಾಜರಿರಬೇಕಾಗಿ ವಿನಂತಿ.
ಕರ್ನಿರೆ ವಿಶ್ವನಾಥ್ ಶೆಟ್ಟಿ ಉಪಾಧ್ಯಕ್ಷರು,ಜಯಕರ್ ಶೆಟ್ಟಿ ಇಂದ್ರಾಳಿ ಗೌರವ ಕಾರ್ಯದರ್ಶಿ, ಉಳ್ತೂರು ಮೋಹನದಾಸ್ ಶೆಟ್ಟಿ ಕೋಶಾಧಿಕಾರಿ, ಚಂದ್ರಹಾಸ್ ಡಿ ಶೆಟ್ಟಿ ರಂಗೋಲಿ ಜೊತೆ ಕಾರ್ಯದರ್ಶಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು



