ಮಂಗಳೂರು: ದೆಹಲಿಯ ಬಾಲಕಟೋರ ಸ್ಟೇಡಿಯಂ ನಲ್ಲಿ ಗ್ಲೋಬಲ್ ಇಂಡಿಯಾ ಎಂಟರ್ ಟೈನ್ ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತ ಪಡಿಸಿರುವ ಮಿಸ್ಸಸ್ /ಮಿಸ್ಟರ್ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ಇಶಿಕಾ ಶೆಟ್ಟಿ “ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ – 2024” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತಾನಾಡಿದ ಇಶಿಕಾ ಶೆಟ್ಟಿ, “ತಂದೆ ತಾಯಿಯ ಸಹಕಾರದಿಂದ ನಾನು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಲು ಸಾಧ್ಯವಾಯಿತು. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ರವೀಶ್ ನಾಯಕ್ ಅವರ ಸಹಕಾರಕ್ಕೆ ಧನ್ಯವಾದಗಳು” ಎಂದರು.



ತಂದೆ ಶರತ್ ಶೆಟ್ಟಿ ಮಾತಾಡಿ “ಇಶಿಕಾ ಕುರಿತು ಮಾತಾಡಲು ಹೆಮ್ಮೆ ಆಗ್ತಾ ಇದೆ, ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ 65ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಅವರಲ್ಲಿ ನನ್ನ ಮಗಳು ಪ್ರಥಮ ಸ್ಥಾನಿಯಾಗಿ ಗೆದ್ದಿರುವುದು ಅತೀವ ಸಂತಸ ಉಂಟುಮಾಡಿದೆ. ನನಗೆ ಪೊಲೀಸ್ ಇಲಾಖೆಯಲ್ಲಿ ಬಹಳ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ನಾನು ಅಭಾರಿ” ಎಂದರು.
ಬಾಲಿವುಡ್‌ನ ಖ್ಯಾತ ಚಿತ್ರ ನಟಿ ಶಿಲ್ಪಾ ಶೆಟ್ಟಿ ಮತ್ತು ಖ್ಯಾತ ಮಾಡೆಲ್ ಮತ್ತು ಮೆಂಟರ್
ಜತಿನ್ ಕಿರ್ಬಾತ್ ರವರು ಅಂತಿಮ ಸುತ್ತಿನ ಜ್ಯೂರಿಯಾಗಿ ಪಾಲ್ಗೊಂಡಿದ್ದ ಈ ಸೌಂದರ್ಯ ಸ್ಪರ್ಧೆಗೆ ದೇಶದ ನಾನಾ ರಾಜ್ಯಗಳ ಒಟ್ಟು 65 ಮಂದಿ ಸ್ಪರ್ದಾಳುಗಳು ಭಾಗವಹಿಸಿದ್ದು, ಅದರಲ್ಲಿ ಇಶಿಕಾ ಶೆಟ್ಟಿ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.


ಕಾವೂರಿನ ಶಿವ ನಗರದಲ್ಲಿ ವಾಸವಾಗಿರುವ ಇಶಿಕಾ ಶೆಟ್ಟಿ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿಯಾಗಿದ್ದಾರೆ. ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಾಂಗ ಮಾಡುತ್ತಿರುತ್ತಾಳೆ.
ಇಶಿಕಾ ಶೆಟ್ಟಿ 2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌದರ್ಯ ಸ್ಪರ್ಧೆಯಲ್ಲಿ ಆಗಿಯೂ ಹಾಗೂ 2023 ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ ಮಿಸ್‌ಟನ್ ಮಂಗಳೂರು ಮಾಡೆಲಿಂಗ್ ಮ್ಯಾನೇಜ್ ಮೆಂಟ್ ರವರು ನಡೆಸಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ 2023 ರ ಪ್ರಶಸ್ತಿಯನ್ನು ಗೆದ್ದಿರುತ್ತಾರೆ.
ಬಾಲ್ಯದಿಂದಲೂ ಶಿಕ್ಷಣದ ಜೊತೆಯಲ್ಲಿ ನಟನೆ ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ
ಅಪಾರ ಆಸಕ್ತಿಯನ್ನು ಹೊಂದಿರುವ ಹಾಗೂ ಸಾಧನೆಯನ್ನು ಗೈಯುತ್ತಿರುವ ಈಕೆಯನ್ನು
ಹಲವಾರು ಸಂಘ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿರುತ್ತಾರೆ. ಕಳೆದ ವರ್ಷ 2023 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಆರಕ್ಷಕರ ಕನ್ನಡೋತ್ಸವ ಸಂಭ್ರಮಾಚರಣೆಯಲ್ಲಿ ಪೊಲೀಸ್
ಇಲಾಖೆಯು ಈಕೆಯನ್ನು ಅತ್ಯಂತ ಗೌರವದಿಂದ ಸನ್ಮಾನಿಸಿ ಪುರಸ್ಕರಿಸಿರುವುದು ಈಕೆಯ ಪ್ರತಿಭೆಗೆ ಸಾಕ್ಷಿಯಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಸಾಯಿ ಕೃಷ್ಣ ಕುಡ್ಲ, ಶರತ್ ಕುಮಾರ್ ಶೆಟ್ಟಿ, ಶ್ವೇತಾ ಶರತ್ ಶೆಟ್ಟಿ, ರವಿಕಲಾ ಶೆಟ್ಟಿ ಉಪಸ್ಥಿತರಿದ್ದರು.










