ಮುಲ್ಕಿ: ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಜನರಲ್ಲಿ ಧೈರ್ಯ ತುಂಬಲು ಮುಲ್ಕಿ ಪೊಲೀಸ್ ಹಾಗೂ ಈ ಆರ್ ಪಿ ಎಫ್ ಯೋಧರಿಂದ ಮುಲ್ಕಿಯಲ್ಲಿ ಪಥ ಸಂಚಲನ ನಡೆಯಿತು.

ಪಥ ಸಂಚಲನವು ಬಪ್ಪನಾಡು ದೇವಸ್ಥಾನದಿಂದ ಹೊರಟು ಶಿಸ್ತುಬದ್ಧವಾಗಿ ಕಾರ್ನಾಡ್ ಗಾಂಧಿ ಮೈದಾನದವರೆಗೆ ನಡೆದು ಜನರಲ್ಲಿ ಧೈರ್ಯ ತುಂಬಿದರು. ಈ ಸಂದರ್ಭ ಮುಲ್ಕಿ ಪೊಲೀಸ್ ಠಾಣೆಯ ಏಎಸ್ಐ ಸಂಜೀವ, ಹರಿಶೇಖರ್ ಮತ್ತು ಸಿಆರ್ಪಿಎಫ್ ತಂಡದ ಸಿಬ್ಬಂದಿ ಉಪಸ್ಥಿತರಿದ್ದರು



