ಬಂಟ್ವಾಳ: ಕಲ್ಲಡ್ಕ ಪೇಟೆಯ ಸರ್ವೀಸ್ ರಸ್ತೆಯ ದುಸ್ಥಿತಿಯ ವಿರುದ್ಧ ಕಲ್ಲಡ್ಕದ ವರ್ತಕರು ಹಾಗೂ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿ ರಸ್ತೆಯನ್ನು ಡೋಸಿಂಗ್ ಮಾಡಿ ಡಾಮಾರು ಹಾಕಿಕೊಡುವಂತೆ ಕೆಎನ್‌ಆರ್ ಕಂಪೆನಿಯ ಅಽಕಾರಿಗಳನ್ನು ಆಗ್ರಹಿಸಿದರು.

ರಸ್ತೆಯು ಏರು ತಗ್ಗಿನಿಂದ ಕೂಡಿರುವ ಪರಿಣಾಮ ವಾಹನ ಸಾಗುವುದಕ್ಕೆ ತೀರಾ ತೊಂದರೆಯಾಗುತ್ತಿದೆ. ಜತೆಗೆ ಧೂಳುನಿಂದ ಜನರ ಆರೋಗ್ಯ ಕೆಡುತ್ತಿದ್ದು, ನೀರು ಹಾಕಲುಯ ಹೇಳಿದರೆ ಡ್ರೈವರ್ ಇಲ್ಲ, ಟ್ಯಾಂಕರ್ ಇಲ್ಲ ಎಂಬ ಉತ್ತರ ನೀಡುತ್ತೀರಿ ಎಂದು ಅಽಕಾರಿಗಳನ್ನು ತರಾಟೆಗೆತ್ತಿಕೊಂಡರು.
ಕೆಎನ್‌ಆರ್ ಕಂಪೆನಿಯ ಎಜಿಎಂ ರೋಹಿತ್ ಅವರು ಜನರ ಆಗ್ರಹವನ್ನು ಆಲಿಸಿದರು. ಮುಂದೆ ಕೆಲವೇ ದಿನಗಳಲ್ಲಿ ಮಳೆ ಬರುವುದರಿಂದ ರಸ್ತೆಯನ್ನು ಸಮತಟ್ಟುಗೊಳಿಸಿ ಹೆಚ್ಚಿನ ಮೆಷಿನ್‌ಗಳನ್ನು ಹಾಕಿ ಶೀಘ್ರ ಡಾಮಾರು ಹಾಕುವ ಕೆಲಸ ಮುಗಿಸುವಂತೆ ಒತ್ತಾಯಿಸಿದರು.



