ಮೂಲ್ಕಿ: ಮೂಲ್ಕಿಯ ಮೂಲ ಶ್ರೀ ಉಗ್ರ ನರಸಿಂಹ ದೇವರು ಭಕ್ತರ ರಕ್ಷಕನಾಗಿ ಕ್ಷಿಪ್ರಫಲದಾಯಕನಾಗಿದ್ದಾರೆ ಎಂದು ಶ್ರೀ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾದೀಶ ಶ್ರೀಮತ್ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಹೇಳಿದರು.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚೈತ್ರ ಬಹುಳ ಷಷ್ಠಿ ಉಪರಿ ಸಪ್ತಮಿಯಂದು ಶ್ರೀಮತ್ ಇಂದಿರಾಕಾಂತ ಸ್ವಾಮೀಜಿಯವರ ಪುಣ್ಯ ತಿಥಿ ಪ್ರಯುಕ್ತ ಮೂಲ್ಕಿ ದೇವಳಕ್ಕೆ ಭೇಟಿ ನೀಡಿ ದೇವರ ಭೇಟಿ ದೇವಳದ ವತಿಯಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿದರು.
ಹರಿ ಗುರುಗಳ ಕೃಪೆ ಇದ್ದರೆ ಎಲ್ಲವೂ ಸಾಧ್ಯವಾಗುತ್ತದೆ ದೇವರಲ್ಲಿ ಅನನ್ಯ ಶ್ರದ್ಧಾ ಭಕ್ತಿಯಿಂದ ಗುರು ಹಿರಿಯರಲ್ಲಿ ಗೌರವದಿಂದ ಸಂಸ್ಕಾರಯುತರಾಗಿ ನಡೆದರೆ ಶ್ರೀ ದೇವರ ಕೃಪಾಶೀವರ್ಾದ ಸದಾ ರಕ್ಷೆಯಾಗಿ ನಮ್ಮನ್ನು ಅಭಿವೃದ್ಧಿಗೊಳಿಸಿ ಶಾಂತಿ ನೆಮ್ಮದಿಯ ಜೀವನ ಕರುಣಿಸುತ್ತದೆ ಎಂದರು. ಬಳಿಕ ಶ್ರೀಗಳು ಶ್ರೀ ದೇವರ ಉತ್ಸವ ಉತ್ಸವದಲ್ಲಿ ಹಾಗೂ ಸ್ವರ್ಣ ಗರುಡ ರಜತ ರಥೋತ್ಸವದಲ್ಲಿ ಭಾಗಿಯಾದರು ಈ ಸಂದರ್ಭ ಶ್ರೀಕ್ಷೇತ್ರದ ಅರ್ಚಕ ವರ್ಗ ಆಡಳಿತ ಸಮಿತಿ ಭಜಕವೃಂದ ಹಾಜರಿದ್ದರು. ಚಿತ್ರ:ಎಂಯುಎಲ್_ಎ30_5ಶ್ರೀ ಸಂಸ್ಥಾನ ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾದೀಶ ಶ್ರೀಮತ್ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಶ್ರೀಕ್ಷೇತ್ರದ ಉತ್ಸವದಲ್ಲಿ ಭಾಗವಹಿಸಿದರು.



