ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇದರ ಹಳೆ ವಿದ್ಯಾರ್ಥಿ ಸಂಘ (WENAMITAA)ದ ಸಭೆಯು ಕಾಲೇಜಿನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಹಾಗೂ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮುಲ್ಕಿಯ ಸ್ಥಾಪಕ ಅಧ್ಯಕ್ಷರಾದ ಮುಲ್ಕಿ ಜೀವನ್ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ಮುಂದಿನ ದಿನದಲ್ಲಿ ಹಳೆ ವಿದ್ಯಾರ್ಥಿ ಹಾಗೂ ಕೈಗಾರಿಕೆ ಮತ್ತು ಕ್ಯಾಂಪಸ್ ನ ಸಂಬಂಧ, ಶೈಕ್ಷಣಿಕ ಹಾಗೂ ಕ್ಯಾಂಪಸ್ ರಿಕ್ರುಟ್ ಮೆಂಟ್ ಬಗ್ಗೆ ಹಳೇ ವಿದ್ಯಾರ್ಥಿಗಳ ಸಹಕಾರ ಕೋರಲಾಯಿತು. ಈ ಎಲ್ಲಾ ವಿಷಯದ ಕುರಿತು ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು. 2024ರ ಜೂಲೈ ತಿಂಗಳ 27 ರಂದು ಕೊಚ್ಚಿಯಲ್ಲಿ ನಡೆಯುವ ಗ್ಲೋಬಲ್ ಆಲುಮಿನಿ ಮೀಟ್ 2024 ರಲ್ಲಿ ಜಗತ್ತಿನ ವಿವಿಧೆಡೆ ಇರುವ ಹಳೇ ವಿದ್ಯಾರ್ಥಿ ಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ನಿರಂಜನ್ ಚಿಪ್ಲುoಕರ್, ಡೀನ್ ರಾಜೇಶ್ ಶೆಟ್ಟಿ , ಡೀನ್ ಶ್ರೀನಿವಾಸ್ ರಾವ್, ಡೀನ್ ಐ. ರಮೇಶ್ ಮಿತಂತಾಯ, ನಿರ್ದೇಶಕ ಯೋಗೀಶ್ ಹೆಗ್ಡೆ, ಸಂಘದ ಉಪಾಧ್ಯಕ್ಷ ಅವಿನಾಶ್ ಕೃಷ್ಣ ಕುಮಾರ್, ಕೋಶಾಧಿಕಾರಿ ಡಾ. ಹರ್ಷಿತಾ, ನಿಕಟ ಪೂರ್ವ ಅಧ್ಯಕ್ಷೆ ಪ್ರಭಾ ನಿರಂಜನ್ಹಾ ಗೂ ಎಲ್ಲಾ ವಿಭಾಗದ ಸಂಚಾಲಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಂಜಿತ್ ಭಟ್ ವಂದಿಸಿದರು.






