ಬೆಳ್ತಂಗಡಿ:ಆಟೋ ರಿಕ್ಷಾವೊಂದು ಮಗುಚಿ ಬಿದ್ದಾಗ ಅದರ ಹಿಂದೆ ಬರುತ್ತಿದ್ದ ರಿಕ್ಷಾ ಹಾಗೂ ಕಾರುಗಳು ಒಂದಕ್ಕೊOದು ಢಿಕ್ಕಿ ಹೊಡೆದು, ಸರಣಿ ಅಪಘಾತ ಸಂಭವಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ನೆಲ್ಯಾಡಿಯ ಜಯಪ್ರಕಾಶ್ ಎಂಬವರಿಗೆ ಸೇರಿದ ಆಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಹಿಂದಿನಿOದ ಬಂದ ಕಾರುಗಳು ಹಾಗೂ ಒಂದು ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾಗಿದೆ. ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಡಿಕ್ಕಿಯಾದ ಮೂರು ಕಾರುಗಳು ಹಾಗೂ ರಿಕ್ಷಾ ಜಖಂಗೊOಡಿದೆ



