ಹಠಾತ್ ಹೃದಯಾಘಾತದಿಂದ ನಮ್ಮನ್ನು ಅಗಲಿದ, ಕಾಸೀಂ ಕನಸಾವಿ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ೦3:೦೦ ಗಂಟೆಗೆ ನೆರವೇರಲಿದೆ.

ಕಾಸಿಮ್_ಕನಸಾವಿ ಅವರಗೆ ಹೃದಯಾಘಾತಯಿತು ಅವರು ನಿಧನ ಹೊಂದಿದರು ಅಂತ್ಯಕ್ರಿಯೆ ಇಂದು ಶನಿವಾರ 18 ಮೇ 2024 ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಅವರ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಅವರು ತುಂಬಾ ಸೌಮ್ಯ ಸ್ವಭಾವದ ವ್ಯಕ್ತಿತ್ವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಚಿತ್ರಕಲಾ ಶಿಕ್ಷಕರು ಇದರ ಜೊತೆ ಜೊತೆಗೆ ಅವರು ಒಬ್ಬ ಒಳ್ಳೆಯ ಕ್ರಿಕೆಟ್ ಬ್ಯಾಟ್ಸ್ಮನ್ ಆಗಿದ್ದರು ನಮ್ಮ ಬಾಲ್ಯದ ದಿನಗಳಲ್ಲಿ ಇಲಕಲ್ ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಟೂರ್ನಮೆಂಟ್ ಗಳನ್ನು ನಾವು ನೋಡಲು ಹೋಗ್ತಾ ಇದ್ವಿ ಆವಾಗ ಕ್ರಿಕೆಟ್ ಪಂದ್ಯದಲ್ಲಿ ಸಿಕ್ಸ್ ಹೊಡೆಯುವುದು ಅಪರೂಪ ಸಿಂಗಲ್ ರನ್ನು 2 ರನ್ನು ಅತ್ಯಂತ ಫೇಮಸ್ ಒಳ್ಳೆ ಆಟಗಾರ ಇದ್ದರೆ ಫೋರ್ ಹೊಡಿತಿದ್ದರು.


ಆದರೆ ಕಾಸಿಮ್ ಕನಸಾವಿ ಅವರು ಬ್ಯಾಟಿಂಗ್ ಗೆ ಬಂದರೆ ಇವರು ಕ್ರಿಕೆಟ್ ಗ್ರೌಂಡ್ ಗೆ ಬಂದ ತಕ್ಷಣ ರೋಮಾಂಚನ ಪ್ರೇಕ್ಷಕರು ಇವರ ಬ್ಯಾಟಿಂಗ್ ನೋಡಬೇಕು ನೋಡಬೇಕು ಅನ್ನೋ ಹಾಗೆ ಇವರ ಆಟ ಆಗಿನ ಕಾಲದಲ್ಲಿ ಇವರು ರೈಟ್ ಹ್ಯಾಂಡ್ ಬ್ಯಾಟ್ಸ್ಮನ್ ಬಾಲ್ ಹಾಕಿದ ತಕ್ಷಣ ಇವರು ಸಡನ್ ಆಗಿ ಲೆಫ್ಟ್ ಹ್ಯಾಂಡ್ ರೀತಿ ನಿಂತು ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ತರ ಸಿಕ್ಸ್ ಹೊಡೆಯುವರು ಅದು ಅತ್ಯದ್ಭುತ ಒಂದು 100 ಮೀಟರ್ ಉದ್ದದ ಸಿಕ್ಸ್ ಹೀಗೆ ಅವರು ತುಂಬಾ ಒಳ್ಳೆ ಕ್ರಿಕೆಟ್ ಕ್ರೀಡಾಪಟು ಹೇಗೆ ಒಂದು ಕಾಸಿಮ್ ಕನಸಾವಿ ಎಂಬ ಒಂದು ಒಳ್ಳೆಯ ಆಟಗಾರನ ಇನ್ನಿಂಗ್ಸ್ ಕೊನೆಯಾಗಿದೆ. ಚಿತ್ರಕಲೆ ಬಿಡಿಸುವ ಕಾಸಿಮ್ ಕನಸಾವಿ ನಮ್ಮನ್ನು ಬಿಟ್ಟು ಅಗಲಿದ್ದಾರೆ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಇಲಕಲ್ ನಗರಕ್ಕೆ ತುಂಬಲಾರದ ನಷ್ಟ ಎಂದು ಹೇಳಲು ಬಯಸುತ್ತೇನೆ ಅತ್ಯಂತ ದುಃಖದ ಸಂಗತಿ.



