ದಕ್ಷಿಣ ಕನ್ನಡ : ವಿಸ್ಮಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಬಿ. ವಾಸುದೇವ್ ಇವರು ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಗೆ ರಾಷ್ಟ್ರೀಯ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಮಾನವ ಹಕ್ಕುಗಳ ಮಾಹಿತಿ ಸಮಿತಿಯಲ್ಲಿ ರಾಜ್ಯಕಾರ್ಯಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ ಡಾ. ಬಿ.ವಾಸುದೇವ ಇವರ ಉತ್ತಮ ಸೇವೆಯನ್ನ ಗುರುತಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯು ಪದೋನ್ನತಿ ನೀಡಿ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಯ ರಾಷ್ಟ್ರಿಯ ಗೌರವಾಧ್ಯಕ್ಷರನ್ನಾಗಿ ನೇಮಿಸಿದೆ.



ವಿಸ್ಮಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಜೊತೆಗೆ, ಕರ್ನಾಟಕ ಸಮರಸೇನೆ ಸ್ಥಾಪಕ ಕಾರ್ಯಾಧ್ಯಕ್ಷರೂ ಆಗಿರುವ ವಾಸುದೇವ ಇವರು, ಎಲ್ಲರೊಂದಿಗೂ ಬೆರೆಯುವ ಜನಪರ ವ್ಯಕ್ತಿಯಾಗಿದ್ದು, ಕಳಂಕ ರಹಿತ, ಜನಪರ ಹಿತ ಆದರ್ಶ ವ್ಯಕ್ತಿಯಾಗಿದ್ದು, ಸಮಾಜಮುಖಿ ಚಿಂತನೆಯುಳ್ಳ, ಇವರು ಇತರರಿಗೆ ಮಾದರಿ ವ್ಯಕ್ತಿ ಎನಿಸಿಕೊಂಡಿದ್ದಾರೆ.




ಸಮಾಜ ಸೇವಕರಾಗಿ, ಚಲನಚಿತ್ರ ನಟರಾಗಿ, ಪತ್ರಕರ್ತರ ಒಡನಾಡಿಯಾಗಿ, ಸಮಾಜದ ಕಷ್ಟಕ್ಕೆ ಸದಾ ಸ್ಪಂದಿಸುವ ಸೃಜನಶೀಲ ಮನೋಭಾವದ ಯೋಗ್ಯರೊಬ್ಬರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಮಾಹಿತಿ ಸಮಿತಿಗೆ ರಾಷ್ಟ್ರೀಯ ಗೌರವ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ವಿಸ್ಮಯವಾಣಿ ಬಳಗ ಸಹಿತ ನಾಡಿನ ಹಲವಾರು ಸಂಘಟನೆಗಳು ಮತ್ತು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ
ಸರಳ ಸಜ್ಜನಿಕೆಯ ವ್ಯಕ್ತಿಯಾದ ವಾಸುದೇವ ಇವರು ಎಲ್ಲರೊಂದಿಗೂ ಬೆರೆಯುವ ಮನೋಭಾವದವರಾಗಿದ್ದು, ನಾಡಿನಾದ್ಯಂತ ಹಲವು ಸಂಘ-ಸಂಸ್ಥೆಗಳಲ್ಲಿ ಸದಸ್ಯರಾಗಿದ್ದು, ಕರ್ನಾಟಕ ರಾಜ್ಯ ಸಹಿತ ದೇಶದ ಹಲವು ಭಾಗಗಳಲ್ಲಿ ಇವರ ಆದರ್ಶ ಸಮಾಜ ಸೇವೆಯನ್ನು ಗುರುತಿಸಿ ಗೌರವ ಸನ್ಮಾನಗಳಾಗಿವೆ.
ಕನ್ನಡ ನಾಡು ನುಡಿ ಜಲ ನೆಲ ಇವುಗಳ ರಕ್ಷಣೆಗಾಗಿ ಸದಾ ಮಿಡಿಯುವ ಇವರು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಕೂಟ ಇದರ ಸಂಸ್ಥಾಪಕರಾಗಿ ಜೊತೆಗೆ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಡಾ.ಬಿ.ವಾಸುದೇವ ಇವರಿಂದ ಇನ್ನಷ್ಟು ಉತ್ತಮ ಸಮಾಜ ಸೇವೆ ದೊರೆಯಲಿ ಎಂದು ನಾಡಿನ ಜನರು ಹಾರೈಸಿದ್ದಾರೆ.












