ಮನೆಯಲ್ಲಿಏಕಾಂಗಿಯಾಗಿ ವಾಸವಿರುವ ಅವರು ಶನಿವಾರ ರಾತ್ರಿ ಸ್ನಾನಕ್ಕೆಂದು ಬಚ್ಚಲು ಮನೆಯಲ್ಲಿ ಹೋದಾಗ ಹಠಾತ್ತನೆ ಕುಸಿದು ಬಿದ್ದು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.

ಸೋಮವಾರ ರಾತ್ರಿ ಮನೆಯೊಳಗಿಂದ ರ್ದುವಾಸನೆ ಬೀರುತ್ತಿದ್ದು, ಅನುಮಾನಗೊಂಡು ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದರು.ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕಾಗಮಿಸಿ ಎದುರಿನ ಬಾಗಿಲು ಮುರಿದು ಒಳಪ್ರವೇಶಿಸಿದಾಗ ಬಚ್ಚಲು ಮನೆಯಲ್ಲಿ ಕೊಳೆತ ಸ್ಥಿತಿ ಮೃತದೇಹ ಕಂಡುಬಂದಿದೆ.ಬಳಿಕ ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು,ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಈ ಬಗ್ಗೆ ಬಂಟ್ಚಾಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



