ಮುಲ್ಕಿ: ರಾಮಕೃಷ್ಣ ಪೂಂಜ ಚಾರಿ ಟೇಬಲ್ ಟ್ರಸ್ಟ್ ವತಿಯಿಂದ ,ಟ್ರಸ್ಟಿ ಭಾಸ್ಕರ್ ಪೂಂಜಾ ಸಹಕಾರದೊಂದಿಗೆ ಮುಲ್ಕಿ ತಾಲ್ಲೂಕು ವ್ಯಾಪ್ತಿಯ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ಹಸ್ತ ನೀಡುವ ಕಾರ್ಯಕ್ರಮ ಮುಲ್ಕಿಯ ಕಾರ್ನಾಡ್ ಪೂಂಜಾ ವಿಲ್ಲಾ ದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ಮಕ್ಕಳು ಜವಾಬ್ದಾರಿ ಅರಿತುಕೊಂಡು ವಿದ್ಯಾರ್ಥಿ ವೇತನ ಮುಖಾಂತರ ಸಂಸ್ಕಾರಯುತ ಶಿಕ್ಷಣ ಪಡೆದು ಇತರ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂಂಜ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದ್ಯಮಿ ಅರವಿಂದ ಪೂಂಜಾ ವಹಿಸಿದ್ದರು
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪೂಂಜಾ ಚಾರಿಟೇಬಲ್ ಟ್ರಸ್ಟಿಗಳಾದ ಗಳಾದ ಅಶ್ವಿನಿ ಪೂಂಜ, ಆದಿತ್ಯ ಪೂಂಜಾ, ಅಪೂರ್ವ ಪೂಂಜಾ , ಹಾಗೂ ಪೂಂಜಾ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕರು ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ವೈ ಎನ್ ಸಾಲ್ಯಾನ್, ಪ್ರಬಂಧಕ ಚಂದ್ರಹಾಸ ಶೆಟ್ಟಿ ನಿರೂಪಿಸಿದರು
ಬಳಿಕ ಸುಮಾರು 6 ಲಕ್ಷ ವೆಚ್ಚದಲ್ಲಿ ಮುಲ್ಕಿ ತಾಲೂಕು ವ್ಯಾಪ್ತಿಯ ಸುಮಾರು 160 ಮಂದಿ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಹಸ್ತ ನೀಡುವ ಕಾರ್ಯಕ್ರಮ ನಡೆಯಿತು



