ಮುಲ್ಕಿ : ಅರಮನೆ ವೆಲ್ಫೇರ್ ಟ್ರಸ್ಟ್ ವತಿಯಿಂದ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಪಡುಪಣಂಬೂರು ಮುಲ್ಕಿ ಸೀಮೆ ಅರಮನೆಯ ಧರ್ಮ ಚಾವಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಏಷ್ಯಾ ನೆಟ್ ಸುವರ್ಣ ನ್ಯೂಸ್ ನ ಮುಖ್ಯ ನಿರೂಪಕಿ ಭಾವನಾ ನಾಗಯ್ಯ ಮಾತನಾಡಿ ಮುಲ್ಕಿ ಸೀಮೆಯ ಅರಸು ಮನೆತನ ವಿಶಿಷ್ಟ ಪರಂಪರೆಯನ್ನು ಹೊಂದಿದ್ದು ಇದರಿಂದಾಗಿ ಸೀಮೆಯಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಬೆಳಗಿದೆ. ಸಂಸ್ಥಾನಗಳು ಬೆಳಗಿದ ದಾರಿಯಿಂದ ಪ್ರಾಂತ್ಯಗಳ ಬೆಳವಣಿಗೆಗೆ ದಾರಿದೀಪವಾಗಿದೆ ಎಂದರು.ವೇದಿಕೆಯಲ್ಲಿ ಏಷ್ಯಾ ನೆಟ್ ಸುವರ್ಣ ಸಂಸ್ಥೆಯ ಹಿರಿಯ ನಿರೂಪಕಿ ಶ್ವೇತಾ ಆಚಾರ್ಯ, ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್,ವಿನೋದ್ ಸಾಲ್ಯಾನ್ ಬೆಳ್ಳಾಯರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಧಕರ ನೆಲೆಯಲ್ಲಿ ಪಾರಂಪರಿಕ ವೈದ್ಯರಾದ ಜ್ಯೋತಿಶ್ಚ0ದ್ರ ಭಟ್ ಹಾಗೂ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ನೇಮಕಗೊಂಡ ಗುರುರಾಜ್ ಎಸ್.ಪೂಜಾರಿ ರವರನ್ನು ಗೌರವಿಸಲಾಯಿತು.ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು



