ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳಾಗಿ ಆಗಮಿಸಿದ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದರು.
ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಪ್ರಸ್ತುತ ಸಮಯದಲ್ಲಿ ಅತೀ ಅವಶ್ಯಕವಾದ ಮತ್ತು ಅಗತ್ಯವಾದ ರಕ್ತವನ್ನು ದಾನದ ರೂಪದಲ್ಲಿ ಪಡೆದು ಇನ್ನೊಂದು ಜೀವವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿರುವ ಬಂಟ್ವಾಳದ ಸಂಘಟನೆ ಇತರರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಜಾಸ್ತಿಯಾಗಿ ಆಸ್ಪತ್ರೆಯಲ್ಲಿ ಅನೇಕರು ಚಿಕಿತ್ಸೆ ಪಡೆಯುತ್ತಿದ್ದು, ಅಗತ್ಯ ಸಮಯದಲ್ಲಿ ಜೀವವನ್ನು ಉಳಿಸಿಕೊಳ್ಳಲು ರಕ್ತದ ಅವಶ್ಯಕತೆ ಇರುವ ಈ ಸಂದರ್ಭದಲ್ಲಿ ಸಂಘಟನೆ ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಅಭಿನಂದನೆ ಸಲ್ಲಿಸಿದರು.
ಪ್ರತಿ ವರ್ಷವೂ ಸಂಘಟನೆಯ ಮೂಲಕ ರಕ್ತದಾನ ಶಿಬಿರ ನಡೆಯುತ್ತಿದ್ದು, ಇದೊಂದು ಮಾದರಿ ಕಾರ್ಯಕ್ರಮ ಎಂದು ಹೇಳಿದರು.


ಗೌರವ ಅತಿಥಿಗಳಾಗಿ ಡಾ|ವಿ.ಹಿಂ.ಪ.ಪುತ್ತೂರು ಅಧ್ಯಕ್ಷ ಕೃಷ್ಣಪ್ರಸನ್ನ, ಬಜರಂಗಳ ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು,ಬಜರಂಗದಳ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ತಾಲೂಕು ಅಧ್ಯಕ್ಷ ಪ್ರಸಾದ್ ಕುಮಾರ್ ರೈ,ಬಜರಂಗದಳದ ಬಂಟ್ವಾಳ ಸಂಚಾಲಕ ಶಿವಪ್ರಸಾದ್ ತುಂಬೆ, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಮಂಗಳೂರು ಇದರ ಅಧಿಕಾರಿ ಲೋಕೇಶ್ ,ಬಜರಂಗದಳ ಸೇವಾ ಪ್ರಮುಖ್ ಪ್ರಸಾದ್ ಬೆಂಜನಪದವು,ಸಮಾಜ ಸೇವಾ ಸಹಕಾರಿ ಬ್ಯಾಂಕ್, ಬಂಟ್ವಾಳ ಇದರ ಅಧ್ಯಕ್ಷ ಸುರೇಶ್ ಕುಲಾಲ್ , ಧರ್ಮ ಪ್ರಸರಣದ ಕಲ್ಲಡ್ಕ ಪ್ರಮುಖ್ ಮನೋಹರ ಕಲ್ಲಡ್ಕ, ಮಾತೃ ಶಕ್ತಿ ಪ್ರಮುಖ್ ಸೌಮ್ಯ ರಾಣಿ,ಗ್ರಾಮ ವಿಕಾಸ ಸಂಯೋಜಕ ಸುಜಿತ್ ಕಲ್ಲಡ್ಕ,ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗಣೇಶ್ ಕುಮಾರ್, ಬ್ಲಡ್ ಬ್ಯಾಂಕ್ ನ ಸಂಯೋಜಕ ಪ್ರವೀಣ್ ಕುಮಾರ್, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ ಅಮ್ಟಾಡಿ, ವಿಶ್ವ ಹಿಂದೂ ಪರಿಷತ್ ಪರಶುರಾಮ ಶಾಖೆ ಬಂಟ್ವಾಳ ಘಟಕದ ಅಧ್ಯಕ್ಷ ಪುರುಷೋತ್ತಮ ಹೊಸಮನೆ ಉಪಸ್ಥಿತರಿದ್ದರು.ಸಂತೋಷ್ ಸರಪಾಡಿ ಸ್ವಾಗತಿಸಿ, ದೀಪಕ್ ಅಜೆಕಲ ಧನ್ಯವಾದ ನೀಡಿದರು.ಸಂಧ್ಯಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.



