ಜನ ಮನದ ನಾಡಿ ಮಿಡಿತ

Advertisement

ನರಿಂಗಾನ : ಅಳಿ ಮಳೆಗೆ ಧರೆಗುರುಳಿದ ಮರಗಳ ರಾಶಿ, ಹಲವು ಮನೆಗಳಿಗೆ ಹಾನಿ, ಸ್ಪೀಕರ್ ಯು.ಟಿ. ಖಾದರ್ ಸ್ಥಳಕ್ಕೆ ಭೇಟಿ, ಪರಿಶೀಲನೆ

ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ,  ಬೀಸಿದ ಬಲವಾದ ಗಾಳಿಗೆ ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲಹಿತ್ತಿಲು, ಕೊರಕಟ್ಟ, ಸರ್ಕುಡೇಲು ವಿವಿಧ ಭಾಗದಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ.

 

ರಾತ್ರಿ ಸುಮಾರು 9.00ಗಂಟೆಗೆ ಬೀಸಿದ ಗಾಳಿಗೆ ಕೊರಕಟ್ಟ ಜಾರಪ್ಪ ಪೂಜಾರಿ, ಸರ್ಕುಡೇಲು ರಾಮ್ ದಾಸ್ ಪೂಜಾರಿ, ಚಂದ್ರಹಾಸ್ ಪೂಜಾರಿ ಸರ್ಕುಡೇಲು, ಕೊರಕಟ್ಟ ಆಲಿಕುಂಞಿ, ಮೋರ್ಲಹಿತ್ತಿಲು ಅಬ್ಬಾಸ್, ಮೋರ್ಲಹಿತ್ತಿಲು ಹನೀಫ್, ಮೋರ್ಲ ಕಂಬಳಕೋಡಿ ಅನ್ಸಾರ್, ಕೊರಕಟ್ಟ ಶೇಖಬ್ಬ, ಮಹಮ್ಮದ್ ಕೊರಕಟ್ಟ ಹಾಗೂ ಪೊಟ್ಟೊಳಿಕೆಯ ಒಂದು ಮನೆಗೆ ಹಾಗೂ ಶಾಂತಿಪಳಿಕೆ ದಿ. ಗುಲಾಬಿ ಅವರ ಪುತ್ರ ಚಂದ್ರಹಾಸ್ ಶಾಂತಿಪಳಿಕೆ ಅವರ ಮನೆಗೆ ಭಾರೀ ಪ್ರಮಾಣದ ಹಾನಿಯಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ. ರಾತ್ರಿಯ ಗಾಳಿ ಮಳೆಗೆ ಈ ರೀತಿ ಅವಾಂತರ ನಡೆದಿದ್ದರೂ ಅದೃಷ್ಟವಶಾತ್ ಗಾಯ ನೋವಾದ ಘಟನೆ ಸಂಭವಿಸಿಲ್ಲ.
ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರದ ಶಾಸಕ, ಕರ್ನಾಟಕ ವಿಧಾನಸಭಾ ಅಧ್ಯಕ್ಷರ ಯು.ಟಿ ಖಾದರ್ ಅವರು ಭೇಟಿ ನೀಡಿ ಅಗತ್ಯ ಕ್ರಮಕ್ಕೆ ತಹಶೀಲ್ದಾರ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿ ವಿಶೇಷ ಸಭೆ ಕರೆದರು.

ರಸ್ತೆಯುದ್ದಕ್ಕೂ ಧರೆಗುರುಳಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ಸ್ಥಳೀಯರು, ಪಂಚಾಯಿತಿ ಪ್ರತಿನಿಧಿಗಳು ಸಹಕರಿಸಿದರು.ಉಳ್ಳಾಲ್ ತಾಲೂಕು ತಹಶೀಲ್ದಾರ್ ಪುಟ್ಟರಾಜು ಮಾಹಿತಿ ಪಡೆದರು.ನರಿಂಗಾನ‌ ಗ್ರಾಮ ಪಂಚಾಯಿತಿ ಅಧ್ಯಕ್ಷ ನವಾಝ್ ನರಿಂಗಾನ, ಪಿಡಿಒ ರಜನಿ ಡಿ. ಗಟ್ಟಿ, ಸದಸ್ಯರುಗಳಾದ ಶೇಖಬ್ಬ ನಿಡ್ಮಾಡ್, ಸಲೀಂ ಪೊಟ್ಟೊಳಿಕೆ, ಮುರಲೀಧರ ಶೆಟ್ಟಿ ಮೋರ್ಲ, ಸುಂದರ ಪೂಜರಿ ಕೋಡಿಮಜಲು ಮೋರ್ಲ, ಲತೀಫ್ ಕಾಪಿಕಾಡ್ ಶಾಸಕರ ಜೊತೆ ಚರ್ಚಿಸಿದರು.

Leave a Reply

Your email address will not be published. Required fields are marked *

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

error: Content is protected !!