ಪಾಕೃತಿಕ ವಿಕೋಪಕ್ಕೆ ತುತ್ತಾಗಿ ಹಾನಿಗೀಡಾದ ಮತ್ತು ನೆರೆಗೆ ನೇತ್ರಾವತಿ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತಗೊಂಡ ಮನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಬೇಟಿ ನೀಡಿ, ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ.

ಬಳಿಕ ಜಿಲ್ಲಾಧಿಕಾರಿ ಅವರಿಂದ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಮಳೆಗೆ ಗುಡ್ಡ ಜರಿತವಾಗಿರುವ ಗೂಡಿನ ಬಳಿ ನೆರೆ ನೀರು ನುಗ್ಗಿ ಸಂತ್ರಸ್ತರಾದ ಆಲಡ್ಕ ಮತ್ತು ನಾವೂರ ಭಾಗದ ಜನರ ಸಮಸ್ಯೆ ಆಲಿಸಿದ ಸಚಿವರು ಬಳಿಕ ಮಳೆಗೆ ಕೊಚ್ಚಿಹೋದ ಕಂಚಿಕಾರ್ ಪೇಟೆ ರಸ್ತೆ ಹಾಗೂ ಸರಪಾಡಿ ಭಾಗದಲ್ಲಿ ನಡೆದ ಹಾನಿಗಳ ಬಗ್ಗೆ ವೀಕ್ಷಣೆ ನಡೆಸಿದ್ರು. ಬಳಿಕ ಮಾಧ್ಯಮವರ ಜೊತೆ ಮಾತನಾಡಿದ ಸಚಿವರು, ನೆರೆಯಿಂದ ಮಳುಗಡೆಯಾದ ಆಲಡ್ಕದದ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆಗುತ್ತದೆ. ಸಂತ್ರಸ್ತರು ವಾಸವಾಗಿರುವ ಜಾಗದ ಮೇಲೆ ಕುಮ್ಕಿ ಜಾಗವೆಂದು ಕೇಸು ದಾಖಲಾಗಿದ್ದು,ಪ್ರಕರಣ ಜಿಲ್ಲಾಧಿಕಾರಿಯವರ ಮುಂದೆ ಇದೆ, ಆದಷ್ಟು ಬೇಗ ಜಾಗದ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಜಮೀನು ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ತಿಳಿಸಿದ್ದೇನೆ. ಸಮಸ್ಯೆ ಪರಿಹಾರವಾದರೆ ಮನೆ ಕಟ್ಟಲು ಸರಕಾರದ ಸಹಾಯಧನ ನೀಡಲಾಗುತ್ತದೆ. ಈ ವರ್ಷ ಸತತವಾಗಿ ಆರು ಬಾರಿ ಈ ಭಾಗಕ್ಕೆ ನೆರೆ ನೀರು ಬಂದಿದೆ ಎಂಬ ವಿಚಾರವನ್ನು ಅವರು ತಿಳಿಸಿದ್ದಾರೆ.



