ಜನ ಮನದ ನಾಡಿ ಮಿಡಿತ

Advertisement

ತರುಣ್ ಸುಧೀರ್‌ ಹಾಗೂ ಸೋನಲ್ ಮಂಥೆರೊ ಅದ್ಧೂರಿ ರಿಸೆಪ್ಷನ್‌ನಲ್ಲಿ ಸ್ಟಾರ್‌ಗಳ ದಂಡು!!

ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್‌ ಸುಧೀರ್‌, ಸೋನಲ್‌ ಮೊಂತೆರೋ ಜೋಡಿಯ ಅದ್ಧೂರಿ ಆರತಕ್ಷತೆಗೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಇಂದು (ಆಗಸ್ಟ್ 11) ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಪ್ಯಾಲೆಸ್ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದಾರೆ.

ತರುಣ್ ಸುಧೀರ್ ಮತ್ತು ಸೋನಲ್ ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಎರಡೂ ಕುಟುಂಬಗಳನ್ನು ಒಪ್ಪಿಸಿ ಬಂಧುಗಳ, ಕುಟುಂಬದವರ ಆಶೀರ್ವಾದದೊಂದಿಗೆ ಮದುವೆ ಆಗಿದ್ದಾರೆ.

ತರುಣ್ ಸುಧೀರ್, ಕನ್ನಡದ ಖ್ಯಾತ ಖಳನಟ ಸುಧೀರ್ ಅವರ ಪುತ್ರ. ಅವರ ಸಹೋದರ ನಂದ ಕಿಶೋರ್ ಸಹ ಕನ್ನಡ ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ದೇಶಕ.

ಇನ್ನು ಸೋನಲ್, ಮಂಗಳೂರಿನ ಚೆಲುವೆ, ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ನಟನೆಗೆ ಕಾಲಿರಿಸಿ, ಹಲವು ಜನಪ್ರಿಯ ಕನ್ನಡ ಸಿನಿಮಾಗಳಲ್ಲಿ ಸೋನಲ್ ನಟಿಸಿದ್ದಾರೆ. ತರುಣ್ ನಿರ್ದೇಶನದ ‘ರಾಬರ್ಟ್’ ಸಿನಿಮಾದಲ್ಲಿಯೂ ಸೋನಲ್ ನಟಿಸಿದ್ದಾರೆ.

ಕಳೆದ ವರ್ಷವೇ ಇವರ ಮದುವೆ ಆಗಬೇಕಿತ್ತಂತೆ ಹಲವು ಕಾರಣಗಳಿಂದ ಮದುವೆ ಮೂಂದೂಡುತ್ತಲೇ ಬರಲಾಗಿತ್ತು. ಈಗ ದರ್ಶನ್ ಬಂಧನ ಆಗಿರುವುದರಿಂದ ಮತ್ತೆ ಮುಂದೂಡುವ ಯೋಚನೆ ಮಾಡಲಾಗಿತ್ತಂತೆ.

ತರುಣ್ ಸುಧೀರ್ ಉತ್ತರ ಕರ್ನಾಟಕದ ಮೂಲದವರಾದರೆ ಸೋನಲ್ ಕರಾವಳಿ ಕರ್ನಾಟಕದವರು. ಇವರಿಬ್ಬರ ಮದುವೆ ಮೂಲಕ ರಾಜ್ಯದ ಎರಡು ಭಿನ್ನ ಸಂಸ್ಕೃತಿಗಳು ಜೊತೆಯಾದಂತಿವೆ.

ತರುಣ್ ಸುಧೀರ್ ಹಾಗೂ ಸೋನಲ್ ಅವರ ವಿವಾಹಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿ ನವ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

error: Content is protected !!