ಮಂಜೇಶ್ವರ: A.I.S.F ಮಂಜೇಶ್ವರ ಮಂಡಲ ಸಮಾವೇಶವು ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ತನಿಷ್ ಕರಿಬೈಲ್ ಅಧ್ಯಕ್ಷತೆ ವಹಿಸಿದರು. ಮೊದಲಿಗೆ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಕ್ತ ಸಾಕ್ಷಿ ಪ್ರಮೇಯ ಮಂಡಿಸಲಾಯಿತು. A.I.S.F ಜಿಲ್ಲಾ ಕಾರ್ಯದರ್ಶಿ ಸೋಯಾ ಸಮಾವೇಶ ಉದ್ಘಾಟಿಸಿದರು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್, ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, AIYF ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್, AIYF ಜಿಲ್ಲಾ ಉಪಾಧ್ಯಕ್ಷ ಹರೀಶ್ ಕೆ.ಆರ್, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ ಆರ್.ಕೆ, AIYF ಮಂಡಲ ಅಧ್ಯಕ್ಷ ಶರತ್ ಬೆಜ್ಜ, ಕಾರ್ಯದರ್ಶಿ ದಯಾಕರ್ ಮಾಡ ಮೊದಲಾದವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಗಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. AISF ನೂತನ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷರಾಗಿ ತನಿಷ್ ಕರಿಬೈಲ್ ಹಾಗೂ ಕಾರ್ಯದರ್ಶಿಯಾಗಿ ಲೇಖಾ ಕಾಜೂರ್ ಆಯ್ಕೆಯಾದರು. ಲೇಖಾ ಕಾಜೂರ್ ಸ್ವಾಗತಿಸಿ, ವಂದಿಸಿದರು.





