ಮುಲ್ಕಿ : ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದ್ರಿ ಮಂಡಲದ ಮಹಿಳಾ ಮೋರ್ಚಾ ವತಿಯಿಂದ ಮುಲ್ಕಿ ಪೊಲೀಸ್ ಠಾಣೆ ಹಾಗು ಮುಲ್ಕಿ ಅರೋಗ್ಯ ಕೇಂದ್ರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಆರಕ್ಷಕ ಠಾಣೆ ಅಧಿಕಾರಿಗಳಿಗೆ ಹಾಗು ಸಿಬಂದಿಗಳಿಗೆ ಮತ್ತು ಆರೋಗ್ಯ ಕೇಂದ್ರದ ಡಾಕ್ಟರ್ ರವರು ಹಾಗು ಸಿಬಂದಿಗಳಿಗೆ ರಕ್ಷೆ ಕಟ್ಟಿ ಸಿಹಿ ಹಂಚಲಾಯಿತು. ಮಹಿಳಾ ಮೋರ್ಚದ ಸದಸ್ಯರನ್ನು, ಆರಕ್ಷಕ ಠಾಣೆ ಮತ್ತು ಆರೋಗ್ಯಕೇಂದ್ರದ ಅಧಿಕಾರಿಗಳು ಆದರಪೂರ್ವಕವಾಗಿ ಸ್ವಾಗತಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲ ರೀತಿಯ ಸಹಕಾರವನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಹಿಳಾ ಮೋರ್ಛದ ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷ್ಮಿ ಜಿಲ್ಲಾ ಒಬಿಸಿ ಮೋರ್ಚಾದ ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು, ಬಳ್ಕುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಮತಾ ಡಿ ಪೂಂಜಾ, ಐಕಳ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಲಕ್ಷ್ಮಿ ,ಹಿರಿಯರಾದ ಬೇಬಿ ಕೆಮ್ಮಡೆ , ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಸರೋಜ ಗುಜರನ್ , ಕಿನ್ನಿಗೋಳಿ ಗ್ರಾಮ ಪಂಚಾಯತ್ನ ಮಾಜಿ ಸದಸ್ಯರಾದ ಹೇಮಲತಾ, ಕಿನ್ನಿಗೋಳಿ ಮಹಿಳಾ ಮೋರ್ಚಾದ ಸದಸ್ಯರಾದ ಶೋಭಾ ರಾವ್, ಸವಿತಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಆಶಾ ರತ್ನಾಕರ ಸುವರ್ಣ, ಜಯಲಕ್ಷ್ಮಿ ಪೂಜಾರಿ ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ರಾಧಿಕ ಕೋಟ್ಯಾನ್, ದಯಾವತಿ, ಮುಲ್ಕಿ ಮಹಿಳಾ ಮೋರ್ಚಾದ ಸಂಚಾಲಕಿ ರೇಷ್ಮಾ ಬೇಕಲ್ , ಸದಸ್ಯರಾದ ಭಾರತಿ ರೈ , ಮಲ್ಲಿಕಾ , ಸುಮಿತ್ರ , ಸುನಿತಾ ಶೆಟ್ಟಿ ಮಹಿಳಾ ಮೋರ್ಚಾದ ಸದಸ್ಯರು ಪಾಲ್ಗೊಂಡಿದ್ದರು.



