ಬಂಟ್ವಾಳ ;ರಾಜ್ಯಮಟ್ಟದ 7 ನೇ ಶಿಕ್ಷಕ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಇವರಿಗೆ ಚುಟುಕು ಚಿನ್ಮಯಿ ರಾಜ್ಯ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಟೀಲ್ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜರಗಿದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾದ ಸಮ್ಮೇಳನದಲ್ಲಿ ದ.ಕ ಜಿಲ್ಲೆಯ ಶಿಕ್ಷಕ ಸಾಹಿತಿಗಳಾದ ಡಾ.ಸುರೇಶ ನೆಗಳಗುಳಿ ,ಮುನಿರಾಜ ರೆಂಜಾಳ ಮೂಡುಬಿದಿರೆ, ಶಾಂತಾ ಪುತ್ತೂರು,ಅಶ್ವಥ್ ಎಸ್.ಎಲ್.ಕಾರ್ಕಳ,ರವೀಂದ್ರ ಶೆಟ್ಟಿ ಬೆಳ್ತಂಗಡಿ ಕಾಸರಗೋಡಿನ ಶಿಕ್ಷಕ ಕವಿ ವಿ.ಬಿ.ಕುಳಮರ್ವ,ಉಡುಪಿಯ ವಿದ್ವಾನ್ ರಘುಪತಿ ಭಟ್
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು,ಕಟೀಲು ಹರಿನಾರಾಯಣ ಆಶ್ರಣ, ಕಚುಸಾಪ ರಾಜ್ಯ ಸಂಚಾಲಕ ಕೃಷ್ಣ ಮೂರ್ತಿ ಕುಲಕರ್ಣಿ,ಉಡುಪಿ ಜಿಲ್ಲಾಧ್ಯಕ್ಷ ಜಿ.ಯು.ನಾಯಕ,ಮೈಸೂರು ವಿಭಾಗಾಧ್ಯಕ್ಷ ಕೆ.ವಿ.ರಮೇಶ್, ಸಮ್ಮೇಳನಾಧ್ಯಕ್ಷ ಶ್ರೀಕಾಂತ ಕೆ.ವಿ.ಹೊಸಕೋಟೆ, ಡಾ.ವಾಣಿಶ್ರೀ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.



