ಜನ ಮನದ ನಾಡಿ ಮಿಡಿತ

Advertisement

ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್‌ ಎಂಟ್ರಿ..!

ಟಿಕ್‌ಟಾಕ್ ಸ್ಟಾರ್, ಯುವ ಕಲಾವಿದ ಧನರಾಜ್ ಆಚಾರ್‌ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಧನರಾಜ್ ಅವರ ಹಾಸ್ಯಮಯ ಮತ್ತು ಸಾಮಾಜಿಕ ಕಳಕಳಿಯ ವಿಡಿಯೋಗಳು ಅಪಾರ ಜನಪ್ರಿಯತೆ ಗಳಿಸಿವೆ. ಮಗುವಿನ ಜನನದ ನಂತರ ಬಿಗ್ ಬಾಸ್ ಅವಕಾಶವನ್ನು ಪಡೆದಿರುವುದು ಅವರ ಅದೃಷ್ಟ ಎಂದು ಕುಟುಂಬ ಹೇಳಿಕೊಂಡಿದೆ.

ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಕಲಾವಿದ, ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್‌ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ.  ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್‌ ಟಿಕ್‌ಟಾಕ್ ಸ್ಟಾರ್  ಎಂದೇ ಪ್ರಸಿದ್ಧಿ ಪಡೆದವರು.  ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ  ಪಡೆದಿದ್ದಾರೆ.  ಅಬ್ಬಬ್ಬಾ ಸಿನಿಮಾದ‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ಮಾಮೇಶ್ವರ ರಾಘವ ಆಚಾರ್‌ ಹಾಗೂ ಸಂಧ್ಯಾ ದಂಪತಿಯ ಪುತ್ರನಾದ ಧನರಾಜ್, ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್‌ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ತನ್ನ ಅಜ್ಜಿ ಕಮಲಜ್ಜಿ ಯ ಜೊತೆಗೆ ತಮ್ಮ‌ಇಡೀ ಫ್ಯಾಮಿಲಿಯನ್ನು ಜಾಗೃತಿ ವಿಡಿಯೋಗಳಿಗೆ ಬಳಸಿ ಇವರ ಕುಟುಂಬ  ಕಮಲಜ್ಜಿ ಫ್ಯಾಮಿಲಿ ಎನ್ನಿಸಿಕೊಂಡಿತ್ತು.  ಈ ಎಲ್ಲದರ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕಾರಣಕ್ಕೆ ಧನರಾಜ್ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ.  ಕರಾವಳಿಯ ಯುವಕ, ಬಹುಮುಖ ಪ್ರತಿಭೆಯ ಕಲಾವಿದ, ಯುಟ್ಯೂಬರ್ 33 ವರ್ಷದ ಧನರಾಜ್ ಆಚಾರ್‌ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ‌ ಕಾಣಿಸಿಕೊಳ್ಳಲಿದ್ದಾರೆ.  ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್‌ ಟಿಕ್‌ಟಾಕ್ ಸ್ಟಾರ್  ಎಂದೇ ಪ್ರಸಿದ್ಧಿ ಪಡೆದವರು.  ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ  ಪಡೆದಿದ್ದಾರೆ.  ಅಬ್ಬಬ್ಬಾ ಸಿನಿಮಾದ‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಗಮನಸೆಳೆದ ಧನರಾಜ್, ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿ ಇಡೀ ವೀಕ್ಷಕರ ಮನಗೆದ್ದವರು. ಮಾಮೇಶ್ವರ ರಾಘವ ಆಚಾರ್‌ ಹಾಗೂ ಸಂಧ್ಯಾ ದಂಪತಿಯ ಪುತ್ರನಾದ ಧನರಾಜ್, ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್‌ ಜೊತೆಗೂಡಿ ಅದೆಷ್ಟೋ ವಿಡಿಯೋಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.ಪತ್ನಿ ಪ್ರಜ್ಞಾ ಆಚಾರ್ಯ ಗರ್ಭಿಣಿ ಯಾದಾಗ ಅಭಿಮಾನಿಗಳಿಗೆ ವಿಶೇಷ ವಿಡಿಯೋ ಮೂಲಕವೇ ಸಿಹಿಸುದ್ದಿ ನೀಡಿದ ಧನರಾಜ್ , ಕಳೆದ ಆಗಸ್ಟ್ 21 ಕ್ಕೆ ಹೆಣ್ಣುಮಗುವಿನ ತಂದೆಯಾಗಿದ್ದಾರೆ. ತನ್ನ ಅಜ್ಜಿ ಕಮಲಜ್ಜಿ ಯ ಜೊತೆಗೆ ತಮ್ಮ‌ಇಡೀ ಫ್ಯಾಮಿಲಿಯನ್ನು ಜಾಗೃತಿ ವಿಡಿಯೋಗಳಿಗೆ ಬಳಸಿ ಇವರ ಕುಟುಂಬ  ಕಮಲಜ್ಜಿ ಫ್ಯಾಮಿಲಿ ಎನ್ನಿಸಿಕೊಂಡಿತ್ತು.  ಈ ಎಲ್ಲದರ ನಡುವೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಕಾರಣಕ್ಕೆ ಧನರಾಜ್ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ತೆರಳಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

ಉಡುಪಿ: ಕೊಲ್ಲೂರಿನಲ್ಲಿ ದನವನ್ನು ಕಾರಿನಲ್ಲಿ ಎಳೆದುಕೊಂಡು ಹೋದ ಪ್ರಕರಣ: ಪ್ರಮುಖ ಆರೋಪಿ ಬಂಧನ

ಸುಳ್ಯ: ಸುಳ್ಯದಲ್ಲಿ ಅ.5ರಂದು ಗಾಂಧಿ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ

error: Content is protected !!