ಜನ ಮನದ ನಾಡಿ ಮಿಡಿತ

Advertisement

ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ನಟ ದುನಿಯಾ ವಿಜಯ್ ಭೇಟಿ

ಉಳ್ಳಾಲ : ಕೊರಗಜ್ಜನ ಬಗ್ಗೆ ಕೇಳುತ್ತಾ ಬಂದಿದ್ದೇನೆ. ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ಶೂಟಿಂಗ್ ಇರುವ ಸಮಯದಲ್ಲಿ ಬಂದಿರುವೆನು. ಮುಂದಿನ ಪ್ರಾಜೆಕ್ಟ್ ಆಗಿ ಮಗಳಿಗಾಗಿಯೇ ಒಂದು ಚಿತ್ರ ತೆಗೀತಾ ಇದ್ದೇನೆ, ಸಿಟಿ ಲೈಫ್ಸ್ ಅನ್ನುವ ಶೀರ್ಷಿಕೆಯಡಿ ನಡೆಸುವ ಚಿತ್ರವನ್ನು ತಾನೇ ನಿರ್ದೇಶಿಸಲಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು.

ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಶುಕ್ರವಾರ ರಾತ್ರಿ ಸಂದರ್ಶನಗೈದು ಮಾತನಾಡಿದರು.

ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪುವಿನ ಎರಡೂ ಕ್ಷೇತ್ರಗಳಲ್ಲಿ ವೈಬ್ರೇಷನ್ ಪವರ್ ಇದೆ . ತಾನು ನಟಿಸುತ್ತಿರುವ 29 ನೇ ಚಿತ್ರ, ಕಾಟೇರಾ ದ ಜಡೇಶ್ ಅವರು ನಿರ್ದೇಶಿಸುತ್ತಿದ್ದು, ಇನ್ನೂ ಚಿತ್ರದ ಹೆಸರನ್ನಿಟ್ಟಿಲ್ಲ. ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರುಸೇರಿದಂತೆ ವಿವಿದೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ ಮಂಗಳೂರು ಭೇಟಿ ನೀಡಿದ್ದು, ಕೊರಗಜ್ಜನ ಬಗ್ಗೆ ದಿನಾ ಕೇಳುತ್ತಲೇ ಇದ್ದೇನೆ. ಹಾಗಾಗಿ ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ. ತನ್ನ ಭೀಮ ಚಿತ್ರಕ್ಕೆ ಮಂಗಳೂರು ಸೇರಿದಂತೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಇಟ್ಟು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಸಿನೆಮಾದ ಗೌರವ ಉಳಿಸಿದ್ದಾರೆ ಎಂದರು.

ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.ಕದ್ರಿ ಈವೆಂಟ್ಸ್ ನ ಸಂಚಾಲಕರಾದ ಜಗದೀಶ್ ಕದ್ರಿ, ದುನಿಯಾ ವಿಜಯ್ ಜತೆಯಲ್ಲಿದ್ದರು.
ಬುರ್ದುಗೋಳಿ ಕ್ಷೇತ್ರದ ಆಡಳಿತ ಸಮಿತಿಯ ಪುರುಷೋತ್ತಮ ಮೇಲಾಂಟ, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು , ಸಂಜಯ್,ಯೋಗಿಶ್, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು,ವನಿತ ಗಿರೀಶ್ ,ಗುರು ಪ್ರಸಾದ್ ಕೊಟ್ಟಾರಿ,ಪ್ರವೀಣ್ ಕೊಲ್ಯ,ಸದಾನಂದ ,ರೇಣುಕ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮೂಡುಬಿದಿರೆ: ಜುಮಾದಿ ದೈವಸ್ಥಾನದ ಬಳಿ ಕ್ಷಣ ಕಾಲ ನಿಂತು ನದಿಗೆ ಹಾರಿದ ಕಂಬಳ ಕೋಣ ‘ದೂಜ’ ಇನ್ನಿಲ್ಲ..!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಹಿತ ಭಾರೀ ಮಳೆ…!

ಮಂಗಳೂರು: ಸಂಕೀರ್ಣ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಗೆ ಹೊಸ ಜೀವನ ನೀಡಿದ ಫಾದರ್ ಮುಲ್ಲರ್ ವೈದ್ಯರ ತಂಡ…!

ಬಂಟ್ವಾಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ..!

ಮಂಗಳೂರು: ಖಾಸಗಿ ಬಸ್- ಆಟೋ ನಡುವೆ ಮುಖಾಮುಖಿ ಡಿಕ್ಕಿ; ಮೂವರಿಗೆ ಗಾಯ..!

ಚಿಕ್ಕಬಳ್ಳಾಪುರ: ಹಣ ಮತ್ತು ಚಿನ್ನಾಭರಣಕ್ಕಾಗಿ ಚಿಕ್ಕಮ್ಮನ ಕೊಲೆ…!

ವಿಶಾಖಪಟ್ಟಣ: ಪಾರ್ಟಿಗೆ ತೆರಳಿದ್ದ ಯುವತಿ ಲಾಡ್ಜ್ ನಲ್ಲಿ ಶ*ವವಾಗಿ ಪತ್ತೆ..!

ಮಂಗಳೂರು: ಎ.20ರಂದು ಐಸಿಡಿಎಸ್ 50ರ ಸುವರ್ಣ ಸಂಭ್ರಮ ಮತ್ತು ಜಿಲ್ಲಾ ಸಮಾವೇಶ….!

ಮಂಗಳೂರು: ಶಕ್ತಿನಗರದ ಹೇಮಂತ್ ಚಮಗಾರರಿಗೆ ಸೇರಿದ ಮನೆಯಲ್ಲಿ ಬೆಂಕಿ ಅವಘಡ..!

error: Content is protected !!