ಬೆಂಗಳೂರು : :ವಿಶ್ವದ ಅತೀ ದೊಡ್ಡ ಅನಿವಾಸಿ ಭಾರತೀಯರ ಸಂಘಟನೆ ಇಂಡಿಯನ್ ಸೋಶಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ ಅಧ್ಯಕ್ಷರಾಗಿರುವ ಮಿತ್ರಂಪಾಡಿ ಜಯರಾಮ ರೈಯವರಿಗೆ ಬೆಂಗಳೂರಿನಲ್ಲಿ ನಡೆದ ಪ್ರಥಮ ಕರ್ನಾಟಕ ಎನ್ಆರ್ ಐ ಸಮ್ಮೇಳನದಲ್ಲಿ ಪ್ರತಿಷ್ಟಿತ ನವಕರ್ನಾಟಕ ಪ್ರಶಸ್ತಿ ಮತ್ತು ದುಬೈಯಲ್ಲಿ ನಡೆದ ಗಡಿನಾಡ ಉತ್ಸವದಲ್ಲಿ ನಾಗರಿಕ ಸನ್ಮಾನ ಮಾಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಮಿತ್ರಂಪಾಡಿ ಜಯರಾಮ ರೈಯವರು ಲೋಕೋಪಕಾರ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ನಿಸ್ವಾರ್ಥ ಮತ್ತು ವಿಶಿಷ್ಟ ಸೇವೆಗಾಗಿ ಅವರನ್ನು ಪ್ರಶಸ್ತಿ, ಸನ್ಮಾನದೊಂದಿಗೆ ಗೌರವಿಸಲಾಗಿದೆ.




