ಚಾಮರಾಜನಗರ: ಕುಡಿತದ ಚಟಕ್ಕೆ ಬಿದ್ದು ನಲುಗಿಹೋದ ಕುಟುಂಬಗಳು ಅದೆಷ್ಟೋ ಇದೆ. ಇಂತದ್ದೇ ಒಂದು ಮನಕಲುಕುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ದಿನನಿತ್ಯ ಮಧ್ಯ ಸೇವಿಸಿ ಬಂದು ಕಿರುಕುಳ ನೀಡುತ್ತಿದ್ದ ಗಂಡನಿಂದ ಬೇಸತ್ತ ಹೆಂಡತಿ ತನ್ನಿಬ್ಬರು ಮಕ್ಕಳಿಗೂ ವಿಷ ಕೊಡಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಧುವನ ಹಳ್ಳಿಯಲ್ಲಿ ನಡೆದಿದೆ.
ಘಟನೆಯಲ್ಲಿ ಎಂಟು ವರ್ಷದ ಮಗಳು ಸಿಂಧು ಸಾವನಪ್ಪಿದರೆ ತಾಯಿ ಶೀಲಾ (25) ಮತ್ತು ಪುತ್ರ ಯಶವಂತ್ (12) ಸ್ಥಿತಿ ಗಂಭೀರವಾಗಿದೆ. ಪತಿ ಮಾದೇಶ್ ವಿಪರೀತ ಕುಡಿಯುತ್ತಿದ್ದ ಪ್ರತಿನಿತ್ಯ ಮಧ್ಯ ಸೇವಿಸಿ ಬಂದು ಪತ್ನಿ ಶೀಲಾಗೆ ಕಿರುಕುಳ ನೀಡುತ್ತಿದ್ದರಿಂದ ನಿರಂತರವಾಗಿ ಗಂಡ ಹೆಂಡತಿ ಮಧ್ಯ ಜಗಳ ಆಗಿತ್ತು. ಇದರಿಂದ ಮನನೊಂದು ಶೀಲಾ 12ರಂದು ಆರು ಗಂಟೆ ಸಮಯದಲ್ಲಿ ತನ್ನಿಬ್ಬರು ಮಕ್ಕಳಿಗೆ ವಿಷ ಕೊಡಿಸಿ ತಾನು ಕುಡಿದಿದ್ದಾಳೆ. ಪುತ್ರಿ ಮರಣ ಹೊಂದಿದ್ದಾಳೆ ಹಾಗೂ ಪುತ್ರ, ಪತ್ನಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರು ತಂದೆ ಮಾದೇಶ್ ಆಸ್ಪತ್ರೆ ಬಂದಿಲ್ಲ. ಹೀಗಾಗಿ ಮಾದೇಶ್ವರ ಸಂಬಂಧಿಕರು ಅಕ್ರೋಶ ಹೊರಹಾಕಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



