ಸ0ವಿಧಾನದ ಅನುಚ್ಚೇದ 341(1)ರಂತೆ ಇದ್ದ ಸಾಂವಿಧಾನಿಕ ಹಕ್ಕನ್ನು ಮರಳಿ ನೀಡಲು ಒತ್ತಾಯಿಸಿ, ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕುಡುಬಿ ಸಮಾಜ ಸೇವಾ ಸಂಘ (ರಿ.) ಕೊಂಪದವು ಹಕ್ಕೊತ್ತಾಯ ಜಾಥಾ ನಡೆಸಲು ನಿರ್ಧರಿಸಿದೆ.

ನ.5ರಂದು ಬೆಳಗ್ಗೆ 10;30ಕ್ಕೆ ಜ್ಯೋತಿ ವೃತ್ತದಿಂದ ಮಿನಿ ವಿಧಾನ ಸೌಧದವರೆಗೆ ಜಾಥಾ ನಡೆಯಲಿದೆ. ಕಳೆದ 70 ವರ್ಷಗಳಿಂದ ಕಳೆದುಕೊಂಡಿರುವ ಸಾಂವಿಧಾನಿಕ ಹಕ್ಕನ್ನು ಮರಳಿ ಪಡೆಯಲು ಕೇಂದ್ರ ಸರಕಾರವನ್ನು ಒತ್ತಾಯಿಸಿ, ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲು ಹಮ್ಮಿಕೊಂಡಿರುವ ಈ ಜಾಥಾದಲ್ಲಿ ಸಮಾಜ ಬಾಂಧವರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘದವರು ವಿನಂತಿಸಿಕೊAಡಿದ್ದಾರೆ.



