ಜನ ಮನದ ನಾಡಿ ಮಿಡಿತ

Advertisement

ಮದುವೆಗೆಂದು ಬಂದ ಬಾಲಕಿಯೋರ್ವಳ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ಮಿಸ್..!!

ಬಂಟ್ವಾಳ: ಮದುವೆಗೆಂದು ಬಂದ ಬಾಲಕಿಯೋರ್ವಳ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ಕಳೆದುಹೋದ ಘಟನೆ ನಡೆದಿದೆ.

ಬಂಟ್ವಾಳದ ಬಸ್ತಿಪಡ್ಪುವಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಇಂದು ನ.10 ರಂದು ನಡೆದ ಮದುವೆ ಕಾರ್ಯಕ್ರಮದಲ್ಲಿ ಮಗುವಿನ ಕುತ್ತಿಗೆಯಿಂದ ಬಂಗಾರದ ಚೈನ್ ಮಿಸ್ ಆಗಿದೆ.ಚೈನ್ ಕಳೆದುಕೊಂಡ ಬಾಲಕಿಯ ಹೆತ್ತವರು ಬಂಟ್ವಾಳ ‌ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಹಾಜರಾದ ಪೋಲೀಸರು ಇಲ್ಲಿನ ಮ್ಯಾನೇಜರ್ ಬಳಿ ಸಿ‌ಸಿ‌ಕ್ಯಾಮರ ದ ಪೂಟೇಜ್ ಗಾಗಿ ಕೇಳಿದಾಗ ಸಭಾಂಗಣದಲ್ಲಿ ಕ್ಯಾಮರಾ ಇಲ್ಲದಿರುವುದು ಬೆಳಕಿಗೆ ಬಂದಿದೆ.

ಈ ವೇಳೆ ಮದುವೆಗೆ ಆಗಮಿಸಿದ ಬಾಲಕಿಯ ಸಂಬಂಧಿಕರು , ಪೋಷಕರು ಮತ್ತು ಮ್ಯಾನೇಜರ್ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ಕೂಡ ನಡೆದಿದೆ ಎನ್ನಲಾಗಿದೆ.ಬಂಗಾರ ಕಳೆದುಹೋಗಿದೆಯಾ? ಅಥವಾ ಕಳ್ಳರು ಕಳ್ಳತನ ಮಾಡಿದ್ದಾರಾ? ಎಂಬುದು ಇಲ್ಲಿ ಅಸ್ಪಷ್ಟವಾಗಿದೆ. ಈ ಘಟನೆಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಲು ಸಿ.ಸಿ.ಕ್ಯಾಮರಾ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.
ಅಷ್ಟಕ್ಕೂ ಚಿನ್ನ ಕಳೆದುಕೊಂಡ ಬಾಲಕಿಯ ಪೋಷಕರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ ವಿನಹಃ ದೂರು ನೀಡಲು ಅವರು ಮುಂದಾಗಿಲ್ಲ ಎಂದು ನಗರ ಠಾಣಾ ಪೋಲೀಸರು ಮಾಹಿತಿ ನೀಡಿದ್ದರೆ.
ಆದರೆ ನಗರ ಠಾಣಾ ಪೋಲೀಸರು ಮಾತ್ರ ನೂತನ ತಂತ್ರಜ್ಞಾನದ ಮೂಲಕ ಇಲ್ಲಿ ಚಿನ್ನ ಕಳೆದುಹೋಗಿರುವ ವಿಚಾರವನ್ನು ನಮೂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಭಾಂಗಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನಗಳು ನಡೆಯುವು ಅತಿಯಾಗಿರುವ ಕಾರಣಕ್ಕಾಗಿ ಎಲ್ಲಾ ಮದುವೆ ಮಂಟಪಗಳಲ್ಲಿಯೂ ಸಿ.ಸಿ.ಕ್ಯಾಮರಾ ಅಳವಡಿಸಿ ಎಂದು ಪೋಲೀಸ್ ಇಲಾಖೆ ಅತ್ಯಂತ ಕಠಿಣವಾಗಿ ಅದೇಶ ನೀಡಿದೆಯಾದರೂ ಇಲ್ಲಿನ ಮಂಟಪದಲ್ಲಿ ಯಾಕೆ ಸಿ.ಸಿ.ಕ್ಯಾಮರಾ ಅಳವಡಿಸಲಾಗಿಲ್ಲ ಎಂಬ ಪ್ರಶ್ನೆಯನ್ನು ಚಿನ್ನ ಕಳೆದುಕೊಂಡವರ ಸಂಬಂಧಿಕರು ಮಾಡಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!