ಜನ ಮನದ ನಾಡಿ ಮಿಡಿತ

Advertisement

ಈಶ್ವರಮಂಗಲ: ಪ್ರವಾದಿ ನಿಂದನಾತ್ಮಕ ಭಿತ್ತಿಪತ್ರ ಪ್ರಕರಣ

ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪುಳಿತ್ತಡಿ ಎಂಬಲ್ಲಿ ಬಸ್ ತಂಗುದಾಣದಲ್ಲಿ ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಲಾಗಿದ್ದು , ಇದು ಸಮಾಜದಲ್ಲಿ ಶಾಂತಿ ಕದಡುವ ಸಮಾಜಘಾತುಕ ಶಕ್ತಿಗಳ ಕೃತ್ಯವಾಗಿ ಇಂಥಹ ಶಕ್ತಿಗಳನ್ನು ಮಟ್ಟಹಾಕುವಂತೆ ಶಾಸಕ ಅಶೋಕ್ ರೈ ಅವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ಪ್ರವಾದಿಯವರನ್ನು ನಿಂದಿಸಿ ಭಿತ್ತಿ ಪತ್ರ ಅಂಟಿಸಿರುವ ಆರೋಪಿಗಳ ವಿರುದ್ದ ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮತ್ತು ಆರೋಪಿಗಳನ್ನು ಬಂಧಿಸಿ ಶಾಂತಿ ಕಾಪಾಡುವಂತೆ ಈಶ್ವರಮಂಗಲ ಮುಸ್ಲಿಂ ಒಕ್ಕೂಟದ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು‌.


ಈ ಸಂಧರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕರು ಶಾಂತಿಯುತವಾಗಿರುವ ಪುತ್ತೂರಿನಲ್ಲಿ ಏನಾದರೂ‌ಮಾಡಿ ಗಲಭೆ ಎಬ್ಬಿಸಬೇಕು ಎಂಬ ಉದ್ದೇಶದಿಂದ ಕೆಲವೊಂದು ಕಿಡಿಗೇಡಿಗಳು ಧಾರ್ಮಿಕ ಮಹಾನ್ ವ್ಯಕ್ತಿಗಳಿಗೆ ನಿಂದನೆ ಮಾಡುವ ಕೃತ್ಯಕ್ಕೆ ಕೈ ಹಾಕಿದ್ದಾರೆ. ಇಂಥವರಿಗೆ ತಕ್ಕ ಶಾಸ್ತಿಯಾಗಬೇಕು, ಪೊಲೀಸ್ ಇಲಾಖೆ ತಕ್ಷಣ ಆರೋಪಿಗಳನ್ನು ಬಂಧಿಸಬೇಕು. ಧರ್ಮದ ವಿಚಾರದಲ್ಲಿ‌ಜನರ ಭಾವನೆ ಕೆರಳಿಸುವ ಯಾರೇ ಆಗಲಿ ಬಂಧಿಸಿ‌ಮಟ್ಟ ಹಾಕಿ‌ಎಂದು ಸೂಚನೆ ನೀಡಿದರು.
ಈ‌ಸಂಧರ್ಭದಲ್ಲಿ‌ ಒಕ್ಕೂಟದ ಪ್ರಮುಖರಾದ ಮಹಮ್ಮದ್ ಬಡಗನ್ನೂರು, ಮೂಸಾನ್ ಕರ್ನೂರು,ಅಬ್ದುಲ್ ರಹಿಮಾನ್ ಮೇನಾಲ,ಸಿ ಎ ಅಬೂಬಕ್ಕರ್,ಇಬ್ರಾಹಿಂ ,ಕೆ ಎಂ ಮಹಮ್ಮದ್, ಮಹಮ್ಮದ್‌ಕುಂಞಿ‌ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

error: Content is protected !!