ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಚಿತ್ರದ ಶೂಟೀಂಗ್ ಭರದಿಂದ ಸಾಗುತ್ತಿದೆ. ಮುಂದಿನ ಅಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲು ಚಿತ್ರತಂಡ ಶೂಟಿಂಗ್ ಮುಗಿಸುವ ತರಾತುರಿಯಲ್ಲಿದ್ದಾರೆ. ಈ ನಡುವೆ ಕಾಂತಾರ ಚಿತ್ರದ ಸೆಟ್ ನಲ್ಲಿ ಶೂಟಿಂಗ್ ಮುಗಿಸಿ ಬಂದ ಜ್ಯೂನಿಯರ್ ಕಲಾವಿದರು ದಿಢೀರ್ ರಸ್ತೆಗಿಳಿದು ಪ್ರತಿಭಟನೆ ನಡಸಿದ್ದಾರೆ. ನಮಗೆ ನ್ಯಾಯ ಕೊಡಿ ಎಂದು ವಿಡಿಯೋ ಮೂಲಕ ಆಕ್ರೋಶ ವ್ಯೆಕ್ತ ಪಡಿಸಿದ್ದಾರೆ. ಅಷ್ಟಕ್ಕೂ ಕಾಂತಾರ ಸಿನಿಮಾ ಸೆಟ್ ನಲ್ಲಿ ಆಗಿರುವುದು ಏನು ಅಂತಿರಾ ಈ ಸ್ಟೋರಿ ನೋಡಿ….

ಹೌದು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಚಾಪ್ಟರ್- 1 ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ 60 ದಿನಗಳ ದೊಡ್ಡ ಶೆಡ್ಯೂಲ್ ಆರಂಭವಾಗಿದ್ದು ಇನ್ನೆರಡು ತಿಂಗಳಲ್ಲಿ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗುವ ನಿರೀಕ್ಷೆಯಿದೆ. ಹಾಲಿವುಡ್ ತಂತ್ರಜ್ಞರು ಕೂಡ ಕಾಂತಾರ ತಂಡವನ್ನು ಸೇರಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾಂತಾರ-1 ಜೊತೆಗೆ ಸಲಾರ್-2 ಚಿತ್ರೀಕರಣ ಕೂಡ ನಡೀತಿದೆ. ಇದೆಲ್ಲದರ ನಡುವೆ ಪ್ರಭಾಸ್ ಜೊತೆ ಮತ್ತೆರಡು ಚಿತ್ರಗಳನ್ನು ಸಂಸ್ಥೆ ಘೋಷಿಸಿದೆ. ರಿಷಬ್ ಶೆಟ್ಟಿ ಜೊತೆಗೆ ಮತ್ತೆ ಸಿನಿಮಾಗಳನ್ನು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಕಾಂತಾರ-1 ಸಿನಿಮಾ ಮುಂದಿನ ಆಗಸ್ಟ್ ವೇಳೆಗೆ ತೆರೆಗೆ ಬರಲಿದೆ. ಕಾಂತಾರ-1 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಒಂದಷ್ಟು ಜ್ಯೂನಿಯರ್ ಆರ್ಟಿಸ್ಟ್‌ಗಳು ಕೂಡ ಚಿತ್ರದಲ್ಲಿ ಕೆಲಸ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಸರಿಯಾಗಿ ಸಂಭಾವನೆ ಹಣ ಕೊಡದೇ ಅನ್ಯಾಯ ಮಾಡುತ್ತಿದ್ದಾರೆ, ಎಂದು ಕೆಲ ಜ್ಯೂನಿಯರ್ ಆರ್ಟಿಸ್ಟ್‌ಗಳು ಬೇಸರ ಹೊರಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇನ್ನೂ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಹೆಚ್ಚು ಜನರು ಸೇರುವ ಸನ್ನಿವೇಶಗಳನ್ನು ಚಿತ್ರಿಸಲು ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಅದೇ ರೀತಿ ಕಾಂತಾರ-1 ಚಿತ್ರದಲ್ಲಿ ಕೂಡ ಒಂದಷ್ಟು ಜನರನ್ನು ಕರೆಸಲಾಗಿದೆ. ಆದರೆ ನಮಗೆ ಸರಿಯಾದ ಸಮಯಕ್ಕೆ ಸಂಭಾವನೆ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಲವರು ಮಾತನಾಡಿರುವ ವೀಡಿಯೋ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಂದಷ್ಟು ಮಹಿಳೆಯರು ಕೂಡ ನಮಗೆ ಪೇಮೆಂಟ್ ಆಗಿಲ್ಲ ಎಂದು ಹೇಳಿದ್ದಾರೆ. ಬೆಂಗಳೂರು, ಕೇರಳದಿಂದಲೂ ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಕರೆಸಲಾಗಿದೆ. ಎಲ್ಲರಿಗೂ ರೀತಿ ಸಮಸ್ಯೆ ಆಗಿದೆ ಎಂದು ಹೇಳಲಾಗ್ತಿದೆ. ಸರಿಯಾಗಿ ಊಟ ಕೂಡ ಇಲ್ಲ, ಕೇಳಿದಷ್ಟು ಇಡ್ಲಿ, ಚಪಾತಿ ಕೊಡಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಒಂದು ಚಿತ್ರೀಕರಣ ಇದೆ ಎಂದು ಕರೆಸಿ ಒಂದೇ ವಾರಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ. ಅವರು ಕೊಡುವ ಹಣ ನಮ್ಮ ಬಸ್ ಚಾರ್ಜ್‌ಗೂ ಸಾಲಲ್ಲ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಶೂಟಿಂಗ್ ಬ್ಯಸಿಯಲ್ಲಿರುವ ಕಾಂತಾರ ಸಿನಿಮಾ ತಂಡಕ್ಕೆ ಜ್ಯೂನಿಯರ್ ಆರ್ಟಸ್ಟ್ ಪೇಮೆಂಟ್ ವಿಚಾರದಲ್ಲಿ ಪ್ರತಿಭಟನೆ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಮುಂದೆ ಈ ವಿಚಾರವನ್ನು ಹೊಂಬಾಳೆ ಸಂಸ್ಥೆ ಮತ್ತು ಕಾಂತಾರ ಚಿತ್ರ ತಂಡ ಮುಂದೆ ಇದನ್ನು ಯಾವ ರೀತಿ ಸಮರ್ಥನೆ ನೀಡುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.



