ಕಟೀಲು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಡಿ. 7 ರಂದು ಮುಂಬೈಯಲ್ಲಿ ನಡೆಯುವ ವಿಶ್ವಬಂಟರ ಸಮಾಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಬಿಡುಗಡೆ ಗೊಳಿಸಿದರು.

ನಂತರ ಮಾತನಾಡಿದ ಅವರು ಐಕಳ ಹರೀಶ್ ಶೆಟ್ಟಿಯವರು ಬಂಡ ಸಮಾಜಕ್ಕೆ ದೊಡ್ಡ ಆಸ್ತಿ, ಅವರು ಅಧ್ಯಕ್ಷರಾಗಿ ಸಾಕಷ್ಟು ಸಮಾಜಮುಖಿ ಕೆಲಸವನ್ನು ಮಾಡಿದ್ದು ಮಾತ್ರವಲ್ಲದೆ, ಇತರ ಸಮಾಜದವರಿಗೂ ಸಹಕಾರ ನೀಡುತ್ತಾ ಬಂದಿದ್ದಾರೆ,ಬಂಟರ ಸಮ್ನೇಳನದ ಮೂಲಕ ಬಂಟ ಸಮಾಜವನ್ನು ಸೇರಿಸುವ ಕಾರ್ಯ ಅಭಿನಂದನೀಯ ಕಳೆದ ವರ್ಷ ಉಡುಪಿಯಲ್ಲಿ ನಡೆದ ಸಮ್ಮೇಳನದ ಅಮಂತ್ರಣ ಪತ್ರಿಕೆಯನ್ನು ಕೂಡ ಕಟೀಲು ದುರ್ಗೆಯ ಸನ್ನಿಧಿಯಲ್ಲಿ ಬಿಡುಗಡೆಗೊಂಡಿದೆ, ಕಾರ್ಯಕ್ರಮ ಯಶಸ್ಸಿಯಾಗಲಿ ಎಂದರು.
ಸಮಾರಂಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸಂತೋಷ್ ಕುಮಾರ್ ಹೆಗ್ಡೆ, ಭುವನಾಭಿರಾಮ ಉಡುಪ, ಶರತ್ ಶೆಟ್ಟಿ, ಸಂತೋಷ್ ಶೆಟ್ಟಿ ಶೆಡ್ಡೆ, ರತ್ನಾಕರ ಶೆಟ್ಟಿ ಎಕ್ಕಾರ್, ಅಶೋಕ್ ಕುಮಾರ್ ಶೆಟ್ಟಿ ಮುಲ್ಕಿ , ಬಾಲಕೃಷ್ಣ ರೈ ಕೊಲ್ಲಾಡಿ, ಸಾಯಿನಾಥ ಶೆಟ್ಟಿ, ತೋನ್ಸೆ ಮನೋಹರ್ ಶೆಟ್ಟಿ, ದೇವಪ್ಪ ಶೆಟ್ಟಿ ಸಾಲೆತ್ತೂರು, ಅಮರೇಶ್ ಸಾಲೆತ್ತೂರು, ಅರವಿಂದ ರೈ, ಅಜಿತ್ ಶೆಟ್ಟಿ ಬಜಪೆ, ಹರೀಶ್ ಶೆಟ್ಟಿ ಬಜಪೆ, ಸಂದೀಪ್ ಶೆಟ್ಟಿ ಎಕ್ಕೂರು, ತೇಜಸ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.



