ಸುಳ್ಯ: ಆಸ್ತಿ ವಿವಾದದ ಹಿನ್ನಲೆಯಲ್ಲಿ ಸಹೋದರರಿಂದಲೇ ಅಣ್ಣ ಕೊಲೆಯಾದ ದಾರುಣ ಘಟನೆ ಸಂಪಾಜೆ ಬಳಿಯ ಚೆಂಬು ಗ್ರಾಮದ ಕುದ್ರೇಪಾಯದಲ್ಲಿ ನಡೆದಿದೆ. ಅಣ್ಣ-ತಮ್ಮಂದಿರಾದ ಉಸ್ಮಾನ್, ಸತ್ತಾರ್, ರಫೀಕ್, ಇಸುಬು, ಅಬ್ಭಾಸ್ ಸಹೋದರರ ನಡುವೆ ಭೂ ವಿವಾದ ಪ್ರಾರಂಭವಾಗಿದ್ದು ಅಣ್ಣ ಉಸ್ಮಾನ್ ಕೊಲೆಯಲ್ಲಿ ಅಂತ್ಯವಾಗಿದೆ. ಸಹೋದರರಿಗೆ ಸೇರಿದ ಸುಮಾರು 50 ಎಕರೆ ಕೃಷಿ ಭೂಮಿ ಕುದ್ರೆಪಾಯದಲ್ಲಿದ್ದು ಜಾಗದ ತಕರಾರಿನಿಂದಾಗಿ ವಿವಾದವೆದ್ದಿತ್ತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಹೋದರರು ಸೇರಿ ಉಸ್ಮಾನ್ ಅವರನ್ನು ಚೂರಿಯಿಂದ ಇರಿದು ಕೊಂದಿರುವುದಾಗಿ ಮಾಹಿತಿ ಲಭಿಸಿದೆ.
ಅರಂತಡ್ಕ ನಿವಾಸಿ ಉಸ್ಮಾನ್ ಮೃತಪಟ್ಟವರು. ಸತ್ತಾರ್, ರಫೀಕ್ ಆರೋಪಿಗಳು. ಉಸ್ಮಾನ್ ಅವರು ಪತ್ನಿ, ಎರಡು ಹೆಣ್ಣು ಹಾಗೂ ಓರ್ವ ಗಂಡು ಮಗನನ್ನು ಅಗಲಿದ್ದಾರೆ. ಉಸ್ಮಾನ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.



