ಎಳತ್ತೂರು ಜತ್ತಬೆಟ್ಟು ಶ್ರೀಮತಿ ವನಜಾಕ್ಷಿ ಶೆಟ್ಟಿಯವರು ನವೆಂಬರ್ 25 ರಂದು ವಯೋಸಹಜವಾಗಿ ವಿಧಿವಶರಾಗಿದ್ದಾರೆ.

ಎಳತ್ತೂರು ಮತ್ತು ಸುತ್ತಮುತ್ತ ಬೇಬಿ ಶೆಟ್ಟಿ ಎಂದೇ ಚಿರ ಪರಿಚಿತರಾಗಿದ್ದ ವನಜಾಕ್ಷಿ ಶೆಟ್ಟಿಯವರು ಜನಾನುರಾಗಿಯಾಗಿದ್ದು, ಎಲ್ಲರಿಗೂ ಬೇಕಾದವರಾಗಿದ್ದರು. ಅತಿಥಿ ದೇವೋಭವ ಎಂಬ ತತ್ವದಲ್ಲಿ ಅಪಾರ ನಂಬಿಕೆಯುಳ್ಳ ಬೇಬೆ ಶೆಟ್ಟಿಯವರು ತಮ್ಮ ಮನೆಗೆ ಯಾರೇ ಬಂದರೂ ಊಟ ಮಾಡಿಸದೇ ಕಳುಹಿಸಿದವರಲ್ಲ. ಸಣ್ಣ ಮಗುವಾಗಲಿ, ಹಿರಿಯರಾಗಲಿ ಗೌರವ ಕೊಟ್ಟು ಪ್ರೀತಿಯ ಮಾತುಗಳಿಂದ ಮಾತನಾಡಿಸಿ ಕಳುಹಿಸುವ ದೊಡ್ಡ ಗುಣ. ತನ್ನ ಅಪೂರ್ವ ಗುಣಗಳಿಂದ ಅಕ್ಕ ಪಕ್ಕದವರಿಗೆ ಪ್ರೀತಿಯ ಬೇಬಿ ಅಕ್ಕನಾಗಿ, ಊರಿನವರಿಗೆ ಗೌರವದ ವನಜಕ್ಕನಾಗಿ, ಸಂಬಂಧಿಕರಿಗೆ ಅಚ್ಚು ಮೆಚ್ಚಿನ ಸಂಬಂಧಿಯಾಗಿ ಎಲ್ಲರ ಪ್ರೀತಿ ಅಭಿಮಾನ ಮತ್ತು ವಿಶ್ವಾಸವನ್ನು ಸಂಪಾದಿಸಿಕೊಂಡ ಗುಣ ಸಂಪನ್ನೆ ಬೇಬಿ ಶೆಟ್ಟಿಯವರು. ಹೆತ್ತವರಿಗೆ ಮುದ್ದಿನ ಮಗಳಾಗಿ, ಗಂಡನಿಗೆ ಅನುರೂಪದ ಸತಿಯಾಗಿ, ಮಕ್ಕಳಿಗೆ ಮಮತೆಯ ತಾಯಿಯಾಗಿ, ನೆರೆಹೊರೆಯವರಿಗೆ ಅಕ್ಕರೆಯ ಅಕ್ಕ, ಪ್ರೀತಿಯ ಅಮ್ಮನಾಗಿ ಮಹಿಳೆಯೊಬ್ಬಳು ಹೇಗೆ ಬದುಕಬೇಕೆಂದು ತೋರಿಸಿಕೊಟ್ಟ ಆದರ್ಶ ಮಹಿಳೆ ಬೇಬಿ ಶೆಟ್ಟಿಯವರು. ಕಷ್ಟ ಸಂಕಷ್ಟದಲ್ಲಿದ್ದವರಿಗೆ ಸಮಾಧಾನ ಪಡಿಸಿ ಸಹಾಯ ಮಾಡಿದ ಕೊಡುಗೈ ಅವರು. ಕೈ ಹಿಡಿದ ಗಂಡನನ್ನು ಕಳೆದುಕೊಂಡರೂ ಮಕ್ಕಳಿಗೆ ಉತ್ತಮ ಸಂಸ್ಕಾರ ವಿದ್ಯೆ ಕೊಟ್ಟು ಎಲ್ಲರೂ ಮೆಚ್ಚುವ ರೀತಿಯಲ್ಲಿ ಬೆಳೆಸಿದವರ . ಮೃತರು ಮಗ ರವಿರಾಜ್ ಮಗಳು ವಾಣಿಯವರನ್ನು ಅಗಲಿದ್ದು ಊರ ಪರವೂರ ಜನರು ಕಂಬನಿ ಮಿಡಿಯುತ್ತಿದ್ದಾರೆ.



