ಜನ ಮನದ ನಾಡಿ ಮಿಡಿತ

Advertisement

ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ; ಎಲ್ಲ ಆರೋಗ್ಯ ಸಮಸ್ಯೆಗಳ ತಪಾಸಣೆಗೆ ಇನ್ನು ಒಂದೇ ಸೂರಿನಡಿ ಅವಕಾಶ

ವೆನ್ಲಾಕ್‌ನಲ್ಲಿ ಈಗಾಗಲೇ ಇರುವ ಹೊರ ರೋಗ ವಿಭಾಗ ಇಕ್ಕಟ್ಟಾಗಿದ್ದು, ಹೆಚ್ಚಿನ ಮೂಲ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಒಂದೊAದು ವಿಭಾಗ ಒಂದೊAದು ಕಡೆ ಇರುವ ಕಾರಣ ರೋಗಿಗಳಿಗೂ ಸಮಸ್ಯೆ ಉಂಟಾಗುತ್ತಿದೆ.

ಇದೇ ಕಾರಣಕ್ಕೆ ಇಲ್ಲಿರುವ ಕೆಲವೊಂದು ಅನ್ಯ ಸೇವೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಮೂಲಕ ಹೊರ ರೋಗಿ ವಿಭಾಗಕ್ಕೆ ಹೆಚ್ಚಿನ ಸ್ಥಳಾವಕಾಶ ದೊರೆಯಲಿದೆ. ಒಂದೇ ಸೂರಿನಡಿ ಎಲ್ಲ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸದ್ಯ ವಾರ್ಡ್, ಔಷಧ ವಿಭಾಗ, ಶಸ್ತçಚಿಕಿತ್ಸಾ ಕೊಠಡಿ ಸಹಿತ ಕೆಲವೊಂದು ವಿಭಾಗ ಅಲ್ಲಲ್ಲಿ ಇದೆ. ಹಳೆ ವೆನ್ಲಾಕ್ ಆಸ್ಪತ್ರೆಯಲ್ಲಿರುವ ಔಷಧ ವಿಭಾಗ ತೀರಾ ಇಕ್ಕಟ್ಟಾಗಿದ್ದು, ಸೀಮಿತ ಸಂಖ್ಯೆಯ ಸಾರ್ವಜನಿಕರು ನಿಲ್ಲಲು ಅವಕಾಶ ಇದೆ. ವೆನ್ಲಾಕ್ ಆಸ್ಪತ್ರೆಯ ಹೊಸ ಸರ್ಜರಿ ಬ್ಲಾಕ್ ಬಳಿ ಪ್ರತ್ಯೇಕ ಸ್ಥಳಾವಕಾಶವಿದ್ದು, ಅಲ್ಲಿಗೆ ಮೆಡಿಸಿನ್ ವಿಭಾಗವನ್ನು ಸ್ಥಳಾಂತರಿಸಲು ನಿರ್ಧಾರ ಮಾಡಲಾಗಿದೆ. ಆಗ ಹೊರ ರೋಗಿ ವಿಭಾಗದಲ್ಲಿ ಹೆಚ್ಚಿನ ಸ್ಥಳಾವಕಾಶ ಸಿಗಲಿದೆ. ಇದರಿಂದ ಇಲ್ಲಿನ ಚುಚ್ಚುಮದ್ದು ಕೊಠಡಿ ಸಹಿತ ಇತರ ವಿಭಾಗವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಹಳೆ ಆಸ್ಪತ್ರೆಯಲ್ಲಿರುವ ಮೂಳೆ ವಿಭಾಗ, ಜನರಲ್ ಸರ್ಜರಿ ವಿಭಾಗವನ್ನು ಇತ್ತೀಚೆಗೆ ಉದ್ಘಾಟನೆಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಡಿಸೆಂಬರ್ನಲ್ಲಿ ಸ್ಥಳಾಂತರ ಮಾಡಲಾಗುತ್ತದೆ.ವೆಸ್ಲಾಕ್ ಆಸ್ಪತ್ರೆಗೆ ಹತ್ತಿರದ ಸುಮಾರು ಎಂಟು ಜಿಲ್ಲೆಗಳಿಂದ ರೋಗಿಗಳು ಚಿಕಿತ್ಸೆಗೆಂದು ಬರುತ್ತದೆ. ಪ್ರಮುಖವಾಗಿ ದ. ಕ., ಉಡುಪಿ, ಚಿಕ್ಕಮಗಳೂರು, ಕಾರವಾರ, ಕಾಸರಗೋಡು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯ ಮಂದಿಯೂ ಚಿಕಿತ್ಸೆಗೆ ಇದೇ ಆಸ್ಪತ್ರೆಗೆ ಬರುತ್ತಾರೆ. ಕ್ಲಿಷ್ಟ ಖಾಯಿಲೆ ಕಾರಣಕ್ಕೆ ತಾಲೂಕು ಆಸ್ಪತ್ರೆಗಳಿಂದ ಬಹುತೇಕ ಪ್ರಕರಣಗಳು ಇಲ್ಲಿಗೆ ಶಿಫಾರಸ್ಸು ಮಾಡಲಾಗುತ್ತದೆ. ದಿನದ 24 ಗಂಟೆಯೂ ಆಸ್ಪತ್ರೆಯನ್ನು ಚಿಕಿತ್ಸೆ ನೀಡಲಾಗುತ್ತಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸರ್ಜಿಕಲ್ ಬ್ಲಾಕ್, ಮೆಡಿಸಿನ್ ಬ್ಲಾಕ್, ಮಕ್ಕಳ ಆಸ್ಪತ್ರೆ, ಅಡಳಿತ ವಿಭಾಗ ಪ್ರತ್ಯೇಕವಾಗಿದ್ದು, ಅದೇ ರೀತಿ, ಕೇವಲ ಹೊರ ರೋಗಿ ವಿಭಾಗಕ್ಕೆ ಪ್ರತ್ಯೇಕ ಕಟ್ಟಡದ ಬೇಡಿಕೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬೇಡಿಕೆ ಇಡಲಾಗಿದೆ. ಈ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆಯ ಆಡಳಿತ ವಿಭಾಗದ ಜತೆ ಮಾತುಕತೆ ನಡೆಸಲಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಗಳ ಜತೆ ವಿಚಾರ ಪ್ರಸ್ತಾಪಿಸಲು ನಿರ್ಧಾರ ಮಾಡಲಾಗಿದೆ ಎಂದು ಅಧಿಕಾರಿಯೋರ್ವರು ಮಾದ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

 

Leave a Reply

Your email address will not be published. Required fields are marked *

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

ಬಂಟ್ವಾಳ: ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಮನೆಯಲ್ಲಿ ನಡೆದ ಕಳವು ಪ್ರಕರಣದ ಆರೋಪಿಗಳು ಸರೆ..!

ಬೆಂಗಳೂರು: ಮುಖ್ಯಮಂತ್ರಿ ಡಿ. ಕೆ. ಶಿಯವರ ಅವರ ಮುಖ್ಯ ಸಲಹೆಗಾರರನ್ನಾಗಿ ಸುನಿಲ್ ಕಾನುಗೋಲು ನೇಮಕ…!

ಮಂಗಳೂರು: ಕಲ್ಲುಗುಡ್ಡೆ ನಿವಾಸಿ ಅರ್. ಪೈನ್ ಮೆಹತಾಬ್ (18) ನಾಪತ್ತೆ..!

error: Content is protected !!