ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಹಿಂದೆ ಬೆಟ್ಟ ಗುಡ್ಡಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನೆಲ್ಲಿಕಾಯಿ ಮರಗಳು ಇದು ಹೈಬ್ರಿಡ್ ಆಗಿ ಬೆಳೆಯಲಾಗುತ್ತಿದೆ. ನೆಲ್ಲಿಕಾಯಿಯಲ್ಲಿ ಇರುವಂತಹ ಅಂಶಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದರಲ್ಲೂ ಬೆಟ್ಟದ ನೆಲ್ಲಿಕಾಯಿಯನ್ನು ಸೇವನೆ ಮಾಡಿದರೆ, ಅದು ಇನ್ನಷ್ಟು ಲಾಭಕಾರಿ. ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ ಹಿಂದಿನಿಂದಲೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ವಿಟಮಿನ್ ಸಿ ಸಮೃದ್ಧವಾಗಿ ಹೊಂದಿರುವ ನೆಲ್ಲಿಕಾಯಿಯನ್ನು ಅಕಾಲಿಕವಾಗಿ ವಯಸ್ಸಾಗುವ ಲಕ್ಷಣಗಳನ್ನು ದೂರ ಮಾಡಲು ಬಳಸಬಹುದು. ಇದು ಎಷ್ಟೇ ಒಣಗಿದರೂ ಅದರಲ್ಲಿನ ವಿಟಮಿನ್ ಸಿ ಅಂಶಕ್ಕೆ ಯಾವುದೇ ರೀತಿಯ ತೊಂದರೆಯೂ ಆಗದು. ಇದರಿಂದ ನೆಲ್ಲಿಕಾಯಿಯನ್ನು ಹಲವಾರು ತಿಂಗಳುಗಳ ಕಾಲ ಬಳಕೆ ಮಾಡಬಹುದು. ನೆಲ್ಲಿಕಾಯಿ ಸೇವನೆ ಮಾಡಿದರೆ ಅದರಿಂದ ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿ ಆಗುವುದು ಮತ್ತು ಕಾಯಿಲೆಗಳ ವಿರುದ್ಧ ರಕ್ಷಣೆ ಸಿಗುವುದು. ಕೆಮ್ಮು, ಶೀತ ಮತ್ತು ಶ್ವಾಸಕೋಸದ ಸಮಸ್ಯೆಗಳನ್ನು ಇದು ದೂರವಿಡುವುದು. ಕೂದಲು ಉದುರುವಿಕೆ, ಬಿಳಿಯಾಗುವ ಸಮಸ್ಯೆಗೂ ಇದು ಪರಿಣಾಮಕಾರಿ.ಇದರಲ್ಲಿ ಇರುವಂತಹ ಪ್ರಬಲ ಆಂಟಿಆಕ್ಸಿಡೆಂಟ್ ಅಂಶವು ಕೂದಲು ಮತ್ತು ಚರ್ಮವನ್ನು ರಕ್ಷಿಸುವುದು. ಹೊಸ ಅಂಗಾಂಶಗಳು ಬೆಳೆಯಲು ಇದು ಸಹಕಾರಿ ಕೂಡ. ಕೂದಲು ಗಂಟು ಕಟ್ಟುವುದು, ಬಿಸಿಲಿನ ಸುಟ್ಟು ಕಲೆಗಳೂ ಮತ್ತು ಬಿಸಿಲಿನಿಂದ ಆಗಿರುವ ಹಾನಿಯನ್ನು ಇದು ತಡೆಯುವುದು.
ಮುಖದ ಮೇಲಿನ ಮೊಡವೆಗಳಿಗೆ ಫೇಶಿಯಲ್ ಕ್ರೀಮ್ ರೀತಿ ಕೆಲಸ ನಿರ್ವಹಿಸುವ ನೆಲ್ಲಿಕಾಯಿ, ಹೊಳಪಿನ ತ್ವಚೆ ಹೊಂದಲು ಸಹಾಯ ಮಾಡುತ್ತದೆ.ನಿಯಮಿತ ಬಳಕೆಯಿಂದಾಗಿ ಚರ್ಮದ ಸುಕ್ಕುಗಳು, ಗೆರೆಗಳು ನಿವಾರಣೆಯಾಗಿ ಸೌಂದರ್ಯ ಹೆಚ್ಚಾಗಲಿದೆ
ಇಂದಿನ ಹೆಚ್ಚಿನ ಶಾಂಪೂಗಳಿಗೆ ನೆಲ್ಲಿಕಾಯಿ ಬಳಕೆ ಮಾಡುವುದನ್ನು ಪ್ರಚಾರ ಮಾಡುವುದನ್ನು ನೀವು ನೋಡಿರಬಹುದು. ನೆಲ್ಲಿಕಾಯಿ ಶಾಂಪೂ ಬಳಕೆ ಮಾಡಿದರೆ, ಅದು ಕೂದಲನ್ನು ಕಾಂತಿಯುತವಾಗಿಸುವುದು.
ಕೂದಲು ಬಿಳಿಯಾಗುವ ಸಮಸ್ಯೆಯನ್ನು ನೆಲ್ಲಿಕಾಯಿ ಜ್ಯೂಸ್ ನಿವಾರಣೆ ಮಾಡುವುದು. ಇದನ್ನು ಪ್ರತಿನಿತ್ಯವೂ ಸೇವನೆ ಮಾಡಿದರೆ, ತುಂಬಾ ಲಾಭಕಾರಿ. ಇಷ್ಟು ಮಾತ್ರವಲ್ಲದೆ, ನೆಲ್ಲಿಕಾಯಿ ಜ್ಯೂಸ್ ನ್ನು ತಲೆಬುರುಡೆಗೆ ಹಚ್ಚಿಕೊಂಡರೆ ಆಗ ಇದು ಕೂದಲನ್ನು ರಕ್ಷಿಸುವುದು.



