ಕಾರ್ಕಳ : ಕೂಲಿ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಘಟನೆ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ. ಬಿಹಾರ ಮೂಲದ ಯುವಕ ಸೌರವ್ ಕುಮಾರ್ (20) ಮೃತ ದುರ್ದೈವಿ. ಕೆಲವು ವರ್ಷಗಳ ಹಿಂದೆ ಕೂಲಿ ಕಾರ್ಮಿಕನಾಗಿ ಬಂದಿದ್ದ ಸೌರವ್ ನಿಟ್ಟೆ ಕಾಲೇಜಿನ ಎದುರುಗಡೆ ಇರುವ ಬಾಡಿಗೆ ಕೊಠಡಿಯಲ್ಲಿ ಸ್ನೇಹಿತರೊಂದಿಗೆ ವಾಸವಾಗಿದ್ದರು. ಮಂಗಳಗಳ ಕಾಟ ಹೆಚ್ಚಾಗಿದ್ದು ಮನೆಯಲ್ಲಿದ್ದ ಕೆಲವು ವಸ್ತುಗಳನ್ನು ಕದ್ದೊಯ್ದು ಅಲ್ಲಲ್ಲಿ ಬಿಸಾಡುತ್ತಿದ್ದವು. ಅವುಗಳನ್ನು ಹುಡುಕಲು ಯುವಕ ಸೌರವ್ ಹಾಗೂ ಗೆಳೆಯರು ನಿನ್ನೆಯೂ ಹೊರಟಿದ್ದಾರೆ. ಮನೆಯ ಟೆರೇಸ್ ಗೆ ಹೋಗಲು ಇಟ್ಟ ಏಣಿಗೆ ವಿದ್ಯುತ್ ತಂತಿ ತಗುಲಿದ್ದು ಅದನ್ನು ಹತ್ತಲು ಹೋದ ಸೌರವ್ ಗೆ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.



