ಜನ ಮನದ ನಾಡಿ ಮಿಡಿತ

Advertisement

ಗ್ರಾಮೀಣ ಪ್ರದೇಶವಾದ ಕಟ್ಟತ್ತಿಲ ಮಠ ಎಂಬ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿದ ಊರಿನ ಹೆಮ್ಮೆಯ ಶಿಕ್ಷಕಿ ಚಿತ್ರಕಲಾ ಟೀಚರ್‌ಗೆ ಗೌರವಾಭಿನಂದನೆ

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಗ್ರಾಮೀಣ ಪ್ರದೇಶವಾದ ಕಟ್ಟತ್ತಿಲ ಮಠ ಎಂಬಲ್ಲಿನ ಸರ್ಕಾರಿ ಶಾಲೆಗೆ ಹೊಸ ರೂಪ ನೀಡಿ ಶಾಲೆಯ ಚಿತ್ರಣವನ್ನೇ ಬದಲಿಸಿದ ಊರಿನ ಹೆಮ್ಮೆಯ ಶಿಕ್ಷಕಿ ಚಿತ್ರಕಲಾ ಅವರ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಕಟ್ಟತ್ತಿಲ ಮಠ ಶಾಲೆಯಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ, ಕಳೆದ 28 ವರ್ಷಗಳಿಂದ ಸಾಲೆತ್ತೂರು ಪರಿಸರದಲ್ಲಿ ಶೈಕ್ಷಣಿಕ ಸೇವೆ ಸಲ್ಲಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಚಿತ್ರಕಲಾ ಅವರ ಸಾಮಾಜಿಕ ಕಳಕಳಿ ಮಾದರಿಯಾದುದು. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಮುಟ್ಟಿದ ಕಾರ್ಯವನ್ನು ಯಶಸ್ವಿಯಾಗಿ ಪರಿಪೂರ್ಣಗೊಳಿಸುತ್ತಿದ್ದರು. ಸ್ವತಃ ಕೈಯಿಂದ ಹಣ ಖರ್ಚು ಮಾಡಿ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ನಿರೂಪಿಸಿದ್ದಾರೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಳ್ನಾಡು ಗ್ರಾಮ ಪಂಚಾಯತ್‌ ಅಧ್ಯಕ್ಷ ಅಶ್ರಫ್‌ ಕೆ, ಬಂಟ್ವಾಳ ತಾಲೂಕಿಗೆ ಮಾದರಿಯಾಗಿ ಕೆಲಸ ನಿರ್ವಹಿಸಿದ ಶಿಕ್ಷಕಿ ಚಿತ್ರಕಲಾ ಅವರ ಸೇವೆ ನಮ್ಮ ಊರಿಗೆ ಅತ್ಯಮೂಲ್ಯವಾಗಿದೆ. ಶೈಕ್ಷಣಿಕ ಸೇವೆ ಜತೆಗೆ ಅವರ ಸಾಮಾಜಿಕ ಕಳಕಳಿ ಸ್ಮರಣಿಯ ಎಂದರು.

ಉದ್ಯಮಿ, ದಾನಿ ಮಾದವ ಮಾವೆ ಮಾತನಾಡಿ, ಚಿತ್ರಕಲಾ ಅವರು ಪಕ್ಕದ ರಾಜ್ಯದವರಾದರೂ ಶೈಕ್ಷಣಿಕ ಸೇವೆಗಾಗಿ ಈ ಶಾಲೆಗೆ ಬಂದ ಬಳಿಕ ಸ್ಥಳೀಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸ್ಥಳೀಯರ ಮನಸ್ಸನ್ನು ಗೆದ್ದು ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಅವರ ನಿವೃತ್ತಿಯ ನಂತರವೂ ಊರಿಗೆ ಅವರ ಸೇವೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಅಧ್ಯಾಪಕರ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ರಮೇಶ್‌ ನಾಯಕ್‌ ರಾಯಿ ಮಾತನಾಡಿ, ಚಿತ್ರಕಲಾ ಅವರು ಅಧ್ಯಾಪಕರ ಸಹಕಾರಿ ಸಂಘದ ಪದಾಧಿಕಾರಿಯಾಗಿದ್ದು, ಅವರು ಅನೇಕ ಮಾರ್ಗದರ್ಶನ ಹಾಗೂ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಈ ಪರಿಸರದ ಜನರ ಒಗ್ಗೂಡಿವಿಕೆಯಿಂದಲೇ ಅವರ ಸೇವೆಯ ಮಹತ್ವ ಅರಿವಾಗುತ್ತದೆ ಎಂದರು.

ಶಿಕ್ಷಣ ಇಲಾಖೆಯಿಂದ ಆಗಮಿಸಿದ್ದ ಪ್ರತಿಮಾ ಪೈ ವಿ., ಊರ ಹಿರಿಯರಾದ ದೇವಿದಾಸ ಶೆಟ್ಟಿ ಪಾಲ್ತಾಜೆ, ವಿಶ್ವನಾಥ ಪೂಜಾರಿ ಕೆ.ಕೆ., ಜಯಂತಿ ಎಸ್‌. ಪೂಜಾರಿ, ಎ.ಬಿ. ಅಬ್ದುಲ್ಲಾ ಅವರು ಚಿತ್ರಕಲಾ ಅವರ ವೃತ್ತಿ ಪಯಣದ ಯಶಸ್ಸುಗಳನ್ನು ಶ್ಲಾಘಿಸಿದರು.

ಗೌರವಾಭಿನಂದನೆ ಸ್ವೀಕರಿಸಿ ಮಾತನಾಡಿದ ಚಿತ್ರಕಲಾ ಕೆ. ಇಲ್ಲಿವರೆಗಿನ ಎಲ್ಲ ಯಶಸ್ಸಿಗೆ ಈ ಊರಿನ ಜನರ ಪ್ರೀತಿ, ಪ್ರೋತ್ಸಾಹ ಕಾರಣವಾಗಿದೆ. ನಿಮ್ಮ ಸಹಕಾರದಿಂದಲೇ ಈ ಕಾರ್ಯ ಯಶಸ್ವಿಯಾಯಿತು. ಈ ಊರಿನ ಪ್ರತಿಯೊಬ್ಬರು ನಾನು ಯೋಚಿಸಿದ ಯೋಜನೆ ಪೂರ್ಣಗೊಳ್ಳಲು ಸಹಕಾರ ನೀಡಿದ್ದೀರಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಸಂಘಗಳು, ಹಿರಿಯ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಸಮಿತಿ, ಶಿಕ್ಷಕವೃಂದ, ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಊರ, ಪರವೂರ ವಿದ್ಯಾಭಿಮಾನಿಗಳು ಪಾಲ್ಗೊಂಡು ಶಿಕ್ಷಕಿಯ ನಿವೃತ್ತ ಜೀವನಕ್ಕೆ ಶುಭಹಾರೈಸಿದರು. ಸುಮಾರು 700ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ವಿಟ್ಲ ಪಡ್ನೂರು ವ್ಯ.ಸ.ಸಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸಾಲೆತ್ತೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಾ, ಕೊಳ್ನಾಡು ಗ್ರಾ.ಪಂ. ಮಾಜಿ ಸದಸ್ಯ ಇಬ್ರಾಹಿಂ, ಸಾಲೆತ್ತೂರು ಸ.ಪ್ರೌ. ಶಾಲೆಯ ಮುಖ್ಯ ಶಿಕ್ಷಕ ಮಲ್ಲೇಶ್‌ ನಾಯಕ್‌, ಬಂಟ್ವಾಳ ಬಿ.ಐ.ಆರ್.ಟಿ. ರವೀಂದ್ರ, ಬಂಟ್ವಾಳ ಪ್ರಾ.ಶಾ. ಶಿ.ಸಂ. ಕಾರ್ಯದರ್ಶಿ ಯತೀಶ್‌, ಕ.ರಾ.ಸ.ನೌ.ಸಂ. ಕಾರ್ಯದರ್ಶಿ, ಎನ್‌.ಪಿ.ಎಸ್. ಸಂಘದ ಅಧ್ಯಕ್ಷ ಸಂತೋಷ್ ಕುಮಾರ್‌ ಉಪಸ್ಥಿತರಿದ್ದರು. ಸಮೂಹ ಸಂಪನ್ಮೂಲ ವ್ಯಕ್ತಿ ರಮೇಶ್‌ ಸ್ವಾಗತಿಸಿ, ಶಾಲಾ ಶಿಕ್ಷಕಿ ಮಮತಾ ಜಿ. ವಂದಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯ ಸಂಪನ್ಮೂಲ ಅಧಿಕಾರಿ ಸುರೇಖಾ ಯಳವಾರ ನಿರೂಪಿಸಿದರು.

 

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!