ಜನ ಮನದ ನಾಡಿ ಮಿಡಿತ

Advertisement

ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ ವಿಚಾರದಲ್ಲಿ ಮೂವರು ಮುಖಂಡರ ವಿರುದ್ಧ ನ್ಯಾಯಾಲಯದಿಂದ ಸಮನ್ಸ್ ಜಾರಿ..!!!

ಬಂಟ್ವಾಳ: ಮಿಲಾದ್ ರ‍್ಯಾಲಿ ವಿಚಾರದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಕಿರುವ ಸವಾಲಿಗೆ ಸಂಬಂಧಿಸಿ ಸೆ.16 ರಂದು ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ ವಿಚಾರದಲ್ಲಿ ಮೂವರು ಮುಖಂಡರ ವಿರುದ್ಧ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ.

 


ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ವಿಹಿಂಪ ಮುಖಂಡರಾದ ಶರಣ್ ಪಂಪುವೆಲ್ ಹಾಗೂ ಭರತ್ ಕುಮ್ಡೇಲ್ ವಿರುದ್ಧ ಹಿಂದೆಯೇ ಪ್ರಕರಣ ದಾಖಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ಚೆನ್ನಪ್ಪಕೋಟ್ಯಾನ್, ವಿಹಿಂಪ ಪ್ರಮುಖ ಸಚಿನ್ ಮೆಲ್ಕಾರ್ ವಿರುದ್ಧ ಬಂಟ್ವಾಳ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ.

 


ಘಟನೆ ವಿವರ
ಈದ್ ಮಿಲಾದ್ ರ್ಯಾಲಿ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ಸಾಮಾಜಿಕ ಜಾಲತಾಣದ ಮೂಲಕ ಹಿಂದೂ ಸಂಘಟನೆಯ ಪ್ರಮುಖರಾದ ಶರಣ್ ಪಂಪ್ ವೆಲ್ ಅವರಿಗೆ ಸವಾಲನ್ನು ಹಾಕಿದ್ದರು. ಸವಾಲನ್ನು ಸ್ವೀಕರಿಸಿದ ಹಿಂದೂ ಸಂಘಟನೆಗಳು ಸೆ. 16 ರಂದು ಬೆಳಿಗ್ಗೆ ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ಜನಸಂಖ್ಯೆಯ ಮೂಲಕ ಪ್ರತಿಭಟನೆ ನಡೆಸಿದ್ದರು. ಸವಾಲು ಸ್ವೀಕರಿಸಿದ ಶರಣ್ ಪಂಪ್ ವೆಲ್ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜೊತೆಗೆ ಪ್ರತಿಭಟನೆ ಉದ್ದೇಶಿಸಿ ಶರಣ್ ಪಂಪ್ ವೆಲ್ ಅವರು ಭಾಷಣ ಮಾಡಿದ್ದರು.ಭಾಷಣದ ಬಳಿಕ ಕಾರ್ಯಕರ್ತರು ಪೋಲೀಸ್ ಬಿಗಿಬಂದೋಬಸ್ತ್ ಗಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿಹಾಕಿ‌ಮುನ್ನುಗ್ಗಲು ಯತ್ನಿಸಿದಾಗ ಪೋಲೀಸರು ತಡೆದು ಬಳಿಕ ಪ್ರತಿಭಟನೆ ಶಾಂತರೂಪ ಪಡೆದಿತ್ತು‌.
ಈ ಘಟನೆಗೆ ಸಂಬಂಧಿಸಿದಂತೆ ಕೆಳಗಿನ ಪೇಟೆ ನಿವಾಸಿ ಮಹಮ್ಮದ್ ರಫೀಕ್ ಎಂಬಾತ ಬಂಟ್ವಾಳ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು.
ದೂರಿನಲ್ಲಿ ಸೆ.16 ರಂದು ‌ನಡೆದ ಪ್ರತಿಭಟನೆಯಲ್ಲಿ ಶರಣ್ ಪಂಪ್ ವೆಲ್, ಭರತ್ ಕುಮ್ಡೆಲು ಎಂಬವರು ಬಿಸಿರೋಡಿನ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಮುಸ್ಲಿಂ ಧರ್ಮವನ್ನು ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಎಂಬವರನ್ನು ಉದ್ದೇಶಿಸಿ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಧರ್ಮವನ್ನು ಅವಹೇಳನ ‌ಮಾಡಿದ್ದಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದ ಮೂಲಕ ಪ್ರಸಾರ ಮಾಡಿದ್ದಾರೆ.ಇದರಿಂದ ಎರಡು ‌ಕೋಮುಗಳ ನಡುವೆ ಸಂಘರ್ಷ ಹಾಗೂ ಶಾಂತಿಭಂಗ ಉಂಟುಮಾಡುವ ರೀತಿಯಲ್ಲಿ ಮಾತನಾಡಿದ ಇವರಿಬ್ಬರ ಮೇಲೆ ಪ್ರಕರಣ ದಾಖಲಿಸಿ ಎಂದು ಇದೆ.
ದ್ವೇಷದ ನಡೆ ಖಂಡನೀಯ: ವಿಕಾಶ್ ಪುತ್ತೂರು
‌‌ಬಿಸಿರೋಡಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ
ಪ್ರಚೋದನೆ ಮತ್ತು ಶಾಂತಿ ಕದಡಲು ಉದ್ದೇಶಿಸಿದ್ದ ಶರೀಫನ ಮೇಲೆ ಕೇಸು ದಾಖಲಿಸುವ ಬದಲು, ಹಿಂದೂ ಮುಖಂಡರಾದ ಶರಣ್ ಪಂಪ್ವೆಲ್ ಮೇಲೆ FIR ದಾಖಲಿಸಿದ್ದರು, ಇದೀಗ ಅವರೊಟ್ಟಿಗೆ ಬಿಜೆಪಿ ನಾಯಕರಾದ ವಿಕಾಸ್ ಪುತ್ತೂರು, ಚೆನ್ನಪ್ಪ ಕೋಟ್ಯಾನ್ ಹಾಗು ವಿಶ್ವ ಹಿಂದೂ ಪರಿಷತ್ತಿನ ಸಚಿನ್ ಮೆಲ್ಕಾರ್ ರವರ ಹೆಸರುಗಳನ್ನೂ ಸೇರಿಸಿ, FIR ದಾಖಲಿಸಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ… ದ್ವೇಶ ಮತ್ತು ಟಾರ್ಗೆಟ್ ಮಾಡಿ FIR ದಾಖಲಿಸುತ್ತಿರುವ ಕಾಂಗ್ರೆಸ್ ಸರಕಾರದ ನಡೆ ಖಂಡನೀಯ ಎಂದು ವಿಕಾಶ್ ಪುತ್ತೂರು ಆರೋಪ ಮಾಡಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!